ಕುಮಾರಸ್ವಾಮಿಗೆ ಭಾರೀ ಸಂಕಷ್ಟ. ಬಜೆಟ್ ದಿನವೇ ಕೋರ್ಟ್ ಗೆ ಹಾಜರಾಗಬೇಕಿದೆ ಕುಮಾರಸ್ವಾಮಿ..!!
ಕರ್ನಾಟಕದಲ್ಲಿಎಚ್ ಡಿ ಕುಮಾರಸ್ವಾಮಿ ಹಾಗೂ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದರ ಮೇಲೊಂದರಂತೆ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಲ್ಲವನ್ನೂ ನಿಭಾಯಿಸುವಲ್ಲಿ ಅಕ್ಷರಶಃ ಸುಸ್ತಾಗಿ ಹೋಗಿದ್ದಾರೆ. ಒಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಇರುವಂತಹ ಭಿನ್ನಮತೀಯರ ಕಾಟವಾದರೆ, ಮತ್ತೊಂದೆಡೆ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವವರನ್ನ ಸಮಾಧಾನ ಪಡಿಸಬೇಕಾದ ಜವಾಬ್ದಾರಿ. ಮೈತ್ರಿ ಸರ್ಕಾರದ ಪಾಲುದಾರರಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಶಾಸಕರುಗಳು ಒತ್ತಡದ ತಂತ್ರವನ್ನು ಅನುಸರಿಸುವ ಮೂಲಕ ಅಗ್ರಗಣ್ಯ ನಾಯಕರುಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಸದ್ಯ ಮೇಲ್ನೋಟಕ್ಕೆ ಎರಡೂ ಪಕ್ಷಗಳಲ್ಲಿ ಅಸಮಾಧಾನಗೊಂಡಿರುವವರು ಸಮಾಧಾನ ಗೊಂಡಿರುವರಂತೆ ಕಾಣುತ್ತಿದ್ದಾರೆಯೇ ವಿನಃ ಇನ್ನೂ ಗೊಂದಲಗಳು ಹಾಗೆಯೇ ಇವೆ. ಯಾವ ಕ್ಷಣದಲ್ಲಿ ಬೇಕಾದರೂ ಈ ಭಿನ್ನಮತೀಯರು ಬಂಡಾಯ ಏಳಬಹುದು. ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಬಹುತೇಕರು ಕಾಯುತ್ತಿದ್ದಾರೆ. ಜೊತೆಜೊತೆಗೆ ನಿಗಮ ಮಂಡಳಿಗಳಲ್ಲಿ ದೊರೆಯಬಹುದಾದ ಸ್ಥಾನಗಳ ಕುರಿತು ನಿರೀಕ್ಷೆಯನ್ನಿಟ್ಟುಕೊಂಡು ಕಾಯುತ್ತಿದ್ದಾರೆ. ಈ ನಡುವೆ ಹಲವಾರು ಭಿನ್ನಮತೀಯ ಶಾಸಕರುಗಳು ಕೂಡ ಸರ್ಕಾರದ ಹೈಕಮಾಂಡ್ ಗಳಿಗೆ ಡೆಡ್ ಲೈನನ್ನು ನೀಡಿದ್ದಾರೆ.
ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡು ಬಂದರೂ ಕೂಡ ಎರಡೂ ಪಕ್ಷಗಳಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ಕ್ಷಣಗಳಲ್ಲಿ ಅಸಮಧಾನ ಸ್ಫೋಟಗೊಂಡು ಸರ್ಕಾರದ ಭವಿಷ್ಯ ಅಯೋಮಯವಾಗಬಹುದಾಗಿದೆ. ಇವೆಲ್ಲ ಸಂಕಷ್ಟಗಳ ನಡುವೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಲು ಸಿದ್ಧರಾಗುತ್ತಿದ್ದಾರೆ. ಆದರೆ ಇದೇ ವೇಳೆ ಕುಮಾರಸ್ವಾಮಿ ಅವರಿಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಇದೇ ಜುಲೈ ಅದು ರಂದು ಕುಮಾರಸ್ವಾಮಿಯವರು ಚೊಚ್ಚಲ ಬಜೆಟ್ ಮಂಡನೆ ಮಾಡಲು ಮುಹೂರ್ತವನ್ನು ಫಿಕ್ಸ್ ಮಾಡಿದ್ದಾರೆ. ಆದರೆ ಅಂದೇ ಕುಮಾರಸ್ವಾಮಿಯವರು ಕೋರ್ಟ್ ಗೆ ಹಾಜರಾಗಬೇಕಾಗಿದೆ.
ಡಿನೋಟಿಫಿಕೇಷನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಇದೇ ಜೂನ್ ಐದರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಡಿನೋಟಿಫಿಕೇಷನ್ ಸಂಬಂಧ ಪಟ್ಟಂತಹ ಪ್ರಕರಣದಲ್ಲಿ ಪೊಲೀಸರು ಸಲ್ಲಿಕೆ ಮಾಡಿರುವ ಆರೋಪ ಪಟ್ಟಿ ಸಂಬಂಧ ಹೇಳಿಕೆ ದಾಖಲಿಸುವ ಸಲುವಾಗಿ ಖುದ್ದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಈಗಾಗಲೇ ಸೂಚನೆ ನೀಡಿದೆ.
ಯಾವ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ..?
ಬೆಂಗಳೂರಿನ ಥಣಿಸಂದ್ರದಲ್ಲಿರುವ ನಾಲ್ಕು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎನ್ನುವ ಆರೋಪ ಕುಮಾರಸ್ವಾಮಿ ಅವರ ಮೇಲಿದೆ. ಈ ಹಳೆಯ ಪ್ರಕರಣಕ್ಕೆ ಈಗ ಮತ್ತೆ ಮರುಜೀವ ಬಂದಿದ್ದು, ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಶ್ರೀರಾಮ್ ಹಾಗೂ ರವಿಪ್ರಕಾಶ್ ಎಂಬುವವರಿಗೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದರು ಎಂಬ ಆರೋಪವಿದೆ.
ಈ ಡಿನೋಟಿಫಿಕೇಶನ್ ಆಗಿರುವ ಭೂಮಿಯನ್ನು ಬಿಡಿಎ ಸ್ವಾಧೀನ ಪಡೆದುಕೊಂಡು ಪರಿಹಾರ ನೀಡಲಾಗಿತ್ತು. ಅಲ್ಲದೆ ನಿವೇಶನಗಳನ್ನು ಸಹ ಹಂಚಿಕೆ ಮಾಡಲಾಗಿತ್ತು. ಆದರೂ ಆಗ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಮನವಿ ಮಾಡಿದ್ದಕ್ಕೆ ಕಾರಣಕ್ಕಾಗಿ ಕುಮಾರಸ್ವಾಮಿಯವರು ಅಲ್ಲಿ ಡೀನೋಟಿಫಿಕೇಷನ್ ಮಾಡಿದ್ದರು. ಈ ಡಿನೋಟಿಫಿಕೇಷನ್ ಅನ್ನು ವಿರೋಧಿಸಿ ಮಹದೇವಸ್ವಾಮಿ ಎಂಬುವವರು ಆರು ವರ್ಷಗಳ ಹಿಂದೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆ ನಂತರ ಪ್ರಕರಣವನ್ನು ರದ್ದು ಮಾಡುವಂತೆ ಕುಮಾರಸ್ವಾಮಿ ಅವರು ಹೈ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿ ತನಿಖೆ ನಡೆಸಲು ನಿರ್ದೇಶನ ನೀಡಿತ್ತು.
ಇದೀಗ ಕೋರ್ಟ್ ಆದೇಶದಂತೆ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಅತ್ತ ಬಜೆಟ್ ಮಂಡನೆಯ ತಲೆಬಿಸಿ ಒಂದೆಡೆಯಾದರೆ ಮತ್ತೊಂದೆಡೆ ಮೈತ್ರಿ ಸರ್ಕಾರದಲ್ಲಿ ಸಮನ್ವಯದ ಕೊರತೆಯ ಕಾಟದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೈರಾಣಾಗಿ ಹೋಗಿದ್ದಾರೆ. ಇದೀಗ ಬಜೆಟ್ ದಿನವೇ ಮತ್ತೊಂದು ಮಹಾ ಸಂಕಷ್ಟ ಎದುರಾಗಿರುವುದು ಕುಮಾರಸ್ವಾಮಿ ಅವರು ಅಕ್ಷರಶಃ ನಿದ್ದೆಗೆಡುವಂತಾಗಿದೆ.
