ಕುವೈತ್ ಜೈಲಿನಲ್ಲಿ ಬಂಧಿಯಾಗಿದ್ದ ಶಂಕರ್ ಪೂಜಾರಿ ಬಿಡುಗಡೆ – Vishwanews24

Featured, ಉಡುಪಿ

ಉಡುಪಿ,: ನಿಷೇಧಿತ ಔಷದ ಸಾಗಾಟ ಆರೋಪದಲ್ಲಿ ಕುವೈತ್ ನಲ್ಲಿ ಬಂಧಿಯಾಗಿದ್ದ ಕುಂದಾಪುರ ಬಸ್ರೂರು ನಿವಾಸಿ ಶಂಕರ್ ಪೂಜಾರಿ (40) ಬಿಡುಗಡೆಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕುವೈತ್ ಅಗ್ರಿಕಲ್ಚರ್ ಪ್ರಾಡಕ್ಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಂಕರ್ ಪೂಜಾರಿ ಕಳೆದ ವರ್ಷ ಮೇ ತಿಂಗಳಲ್ಲಿ 10 ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದು, ವಾಪಸು ತೆರಳುವಾಗ ಪರಿಚಯಸ್ಥರು ನೀಡಿದ್ದ ಔಷಧ ಪಾರ್ಸೆಲ್ ನ್ನು ತೆಗೆದುಕೊಂಡು ಹೋಗಿದ್ದರು. ಅದು ಕುವೈತ್ ನಲ್ಲಿ ನಿಷೇಧಿತ ಔಷಧವಾಗಿದ್ದ ಕಾರಣ ವಿಮಾನ ನಿಲ್ದಾಣದಲ್ಲಿ ಇಳಿದ ಶಂಕರ ಪೂಜಾರಿಯವರನ್ನು ಪೊಲೀಸರು ಬಂಧಿಸಿದ್ದರು.

ಶಂಕರ ಪೂಜಾರಿ ಅವರ ಬಿಡುಗಡೆಗೆ ಸಂಬಂಧಿಸಿ ಉಡುಪಿ ಜಿಲ್ಲಾ ಆಡಳಿತ, ಕರವೇ, ಮಾನವ ಹಕ್ಕು ಪ್ರತಿಷ್ಟಾನ,ಕುವೈತ್ ತುಳುಕೂಟ, ಬಿಲ್ಲವ ಸಂಘ ಶ್ರಮಿಸಿದೆ. ಎಲ್ಲರ ಪ್ರಯತ್ನ ಸಹಕಾರದಿಂದ ಪತಿ ನ್ಯಾಯಾಲಯ ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕುವೈತ್ ಉದ್ಯಮಿ ಪುಷ್ಪರಾಜ್ ಎಂಬವರು ಕರೆ ಮಾಡಿ ವಿಚಾರ ತಿಳಿಸಿದ್ದಾರೆ ಎಂದು ಶಂಕರ್ ಪೂಜಾರಿ ಅವರ ಪತ್ನಿ ಜ್ಯೋತಿ ಬಸ್ರೂರು ತಿಳಿಸಿದ್ದಾರೆ.