ಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಗೂ ಸುವರ್ಣ ಗೋಪುರ ಶಿಖರ ಪ್ರತಿಷ್ಠೆ -Vishwanews24

Featured, ಉಡುಪಿ

ಉಡುಪಿ, : ಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಗೂ ಸುವರ್ಣ ಗೋಪುರ ಶಿಖರ ಪ್ರತಿಷ್ಠೆಯು ಜೂನ್ 6ಕ್ಕೆ ನೆರವೇರಿತು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಗೂ ಸುವರ್ಣ ಗೋಪುರ ಶಿಖರ ಪ್ರತಿಷ್ಠೆಯೊಂದಿಗೆ ಸುವರ್ಣ ಗೋಪುರಕ್ಕೆ ಸಹಸ್ರ ರಜತ ಕಲಶಾಭಿಷೇಕ ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ನೆರವೇರಿತು.

ಇಂದು ಸುವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಮೂರು ಸ್ವರ್ಣ ಶಿಖರಗಳ ಪ್ರತಿಷ್ಠೆ, 1008 ಕಲಶಗಳ ಅಭಿಷೇಕ ನಡೆಯಿತು. ಸ್ವರ್ಣ ಗೋಪುರಕ್ಕೆ ಅಟ್ಟಳಿಗೆ ಕಟ್ಟಿ ಅಲ್ಲಿ ನಿಂತು ಅಷ್ಟ ಮಠಾಧೀಶರು ಮೂರೂ ಶಿಖರಗಳಿಗೆ ಅಭಿಷೇಕ ಮಾಡಿದರು. ಪರ್ಯಾಯ ಶ್ರೀಪಲಿಮಾರು ಮಠದ, ಶ್ರೀಪೇಜಾವರ ಮಠದ, ಶ್ರೀ ಅದಮಾರು ಮಠದ ಹಿರಿಯ, ಕಿರಿಯ ಮಠಾಧೀಶರು, ಶ್ರೀಕೃಷ್ಣಾಪುರ, ಶ್ರೀಕಾಣಿಯೂರು ಹಾಗೂ ಶ್ರೀಸೋದೆ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.