ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ – vishwanews24
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸಂಚಾರ ಸುಗಮಗೊಳಿಸಲು ಮತ್ತು ಕರ್ಬ್ಸೈಡ್ನಲ್ಲಿ ಆಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು 2025ರ ಡಿ.8 ರಂದು ಹೊಸ ಪಿಕ್-ಅಪ್ ನಿಯಮಗಳನ್ನು ಜಾರಿಗೊಳಿಸುತ್ತದೆ.
ಪ್ರತಿದಿನ ವಿಮಾನ ನಿಲ್ದಾಣದಲ್ಲಿ ಸುಮಾರು 1.3 ಲಕ್ಷ ಪ್ರಯಾಣಿಕರು ಮತ್ತು 1 ಲಕ್ಷ ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ವಿಶೇಷವಾಗಿ ಟರ್ಮಿನಲ್ಗಳ ಮುಂದೆ ಇರುವ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶಗಳಲ್ಲಿ ವಾಹನಗಳು ಹೆಚ್ಚು ಸಮಯ ನಿಂತಿರುವುದರಿಂದ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಪ್ರಯಾಣಿಕರು ಹಾಗೂ ಚಾಲಕರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆ, ಬಿಐಎಎಲ್ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಹೊಸ ನಿಯಮ
ಟಿ1 ಮತ್ತು ಟಿ2 ಟರ್ಮಿನಲ್ಗಳ ಆಗಮನ ವಲಯಕ್ಕೆ ಖಾಸಗಿ ಕಾರುಗಳಿಗೆ ಪ್ರವೇಶ ಉಚಿತ.
ಆದರೆ ಉಚಿತ ನಿಲುಗಡೆ ಸಮಯ 8 ನಿಮಿಷ ಮಾತ್ರ.
8-13 ನಿಮಿಷ ನಿಂತರೆ: 7150
13-18 ನಿಮಿಷ ನಿಂತರೆ: 7300
18 ನಿಮಿಷ ಮೀರಿದರೆ: ವಾಹನವನ್ನು ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾಗುತ್ತದೆ
ಈ ನಿಯಮಗಳು ಕರ್ಬ್ಸೈಡ್ನ್ನು ಅನಗತ್ಯವಾಗಿ ಬಳಸುವುದನ್ನು ತಡೆಯಲು ಜಾರಿಗೊಳಿಸಲಾಗಿದೆ.
ಕ್ಯಾಬ್ಗಳು ಮತ್ತು ಇತರೆ ವಾಣಿಜ್ಯ ವಾಹನಗಳಿಗೆ ನಿಯಮ
ಹಳದಿ ಬೋರ್ಡ್ ಟ್ಯಾಕ್ಸಿ, ಓಲಾ-ಉಬರ್, ಎಲೆಕ್ಟಿಕ್ ಕ್ಯಾಬ್ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಕಾಯಬೇಕು.
ಪಾರ್ಕಿಂಗ್ನ ಮೊದಲ 10 ನಿಮಿಷ ಉಚಿತ
ಟಿ1 ವಾಹನಗಳು P3 | P4
ಟಿ2 ವಾಹನಗಳು P2 ಪಾರ್ಕಿಂಗ್ಗೆ ತೆರಳಬೇಕು
ಕರ್ಬ್ಸೈಡ್ನಲ್ಲಿ ಅನಧಿಕೃತವಾಗಿ ನಿಲ್ಲುವುದು, ಪಿಕಪ್ ಮಾಡುವುದು ಅಥವಾ ಪಥ ತಡೆದು ನಿಲ್ಲುವುದಕ್ಕೆ ದಂಡ ವಿಧಿಸಲಾಗುತ್ತದೆ.
ಯಾಕೆ ಹೊಸ ನಿಯಮ?
ಇತ್ತೀಚೆಗೆ ಅನಧಿಕೃತ ಕ್ಯಾಬ್ಗಳು ಮತ್ತು ಕೆಲವು ವಾಹನಗಳು ದೀರ್ಘಕಾಲ ರಸ್ತೆಬದಿಯಲ್ಲಿ ನಿಲ್ಲುವುದರಿಂದ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಪ್ರಯಾಣಿಕರಿಗೆ ವಿಳಂಬ, ಗೊಂದಲ ಮತ್ತು ಸುರಕ್ಷತಾ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಪ್ಪಿಸಲು ನಿಯಮಗಳು ಕಡ್ಡಾಯಗೊಳಿಸಲಾಗಿದೆ.
ಉಡುಪಿ: ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮಕ್ಕೆ ಸೂಚನೆ – vishwanews24
ಬಿಐಎಎಲ್ ಪ್ರತಿಕ್ರಿಯೆ
ಬಿಐಎಎಲ್ ಎಂ.ಡಿ. ಮತ್ತು ಸಿಇಒ ಹರಿ ಮರಾರ್ ಹೇಳುವಂತೆ,
“ಪ್ರಯಾಣಿಕರ ಸಂಖ್ಯೆ ಏರುತ್ತಿರುವುದರಿಂದ ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಅತ್ಯಂತ ಮುಖ್ಯ. ಹೊಸ ನಿಯಮಗಳು ಸಂಚಾರವನ್ನು ಹೆಚ್ಚು ಸುರಕ್ಷಿತ ಮತ್ತು ವೇಗವಾಗಿ ಮಾಡುತ್ತವೆ,” ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣವು ಸಾಮಾಜಿಕ ಜಾಲತಾಣಗಳಲ್ಲಿ #BeCabWise ಅಭಿಯಾನ ನಡೆಸುತ್ತಿದೆ. ಇದರ ಉದ್ದೇಶ:
ಸರಿಯಾದ ಪಿಕ್-ಅಪ್ ಪಾಯಿಂಟ್ ಬಳಕೆ
ದಟ್ಟಣೆ ರಹಿತ ವಾತಾವರಣ
ಸುರಕ್ಷಿತ ಮತ್ತು ವೇಗವಾದ ಸಂಚಾರ
ಬಿಐಎಎಲ್ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಹೂಡಿಕೆಗಳ ಮೂಲಕ ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವ ನೀಡಲು ಬದ್ಧವಾಗಿದೆ.
ಬಿಎಸ್ವೈಗೆ ಬಿಗ್ ರಿಲೀಫ್ : ಪೋಕ್ಸೊ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ – vishwanews24
