ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ, ನವದುರ್ಗಾ ಬಸ್ ಮಾಲಕರಾದ ಕೆ. ಬಿ. ಬಾಲಕೃಷ್ಣ ರೈ ನಿಧನ : ಕುಯಿಲಾಡಿ ತೀವೃ ಸಂತಾಪ -Vishwanews24

Featured, ಉಡುಪಿ

ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ, ನವದುರ್ಗಾ ಬಸ್ ಮಾಲಕರಾದ ಕೆ. ಬಿ. ಬಾಲಕೃಷ್ಣ ರೈ ನಿಧನ : ಕುಯಿಲಾಡಿ ತೀವೃ ಸಂತಾಪ -Vishwanews24

ಉಡುಪಿ : ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ, ನವದುರ್ಗಾ ಬಸ್ ಮಾಲಕರಾದ ಕೆ. ಬಿ. ಬಾಲಕೃಷ್ಣ ರೈ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಕರ್ನಾಟಕ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.

ರೈಯವರು ಹಲವಾರು ವರ್ಷಗಳಿಂದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಹಲವಾರು ಹಳ್ಳಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಿದ್ದಾರೆ. ಅವರ ನಿಧನದಿಂದ ಸಾರಿಗೆ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಕುಯಿಲಾಡಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.