ಕೆಲವರಿಗೆ ಕುಟುಂಬವೇ ಪಕ್ಷ ; ಬಿಜೆಪಿಗೆ ಪಕ್ಷವೇ ಕುಟುಂಬ : ಪ್ರಧಾನಿ ಮೋದಿ – Vishwanews24

Featured, ರಾಷ್ಟ್ರ ನ್ಯೂಸ್
ನವದೆಹಲಿ: ಪ್ರಿಯಾಂಕ ವಾಧ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಮಹಾರಾಷ್ಟ್ರದ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಒಂದು ಕುಟುಂಬವನ್ನು ಆಧರಿಸಿ ಬಿಜೆಪಿಯಲ್ಲಿ ಯಾವುದೇ ನಿರ್ಧಾರಗಳನ್ನೂ ಕೈಗೊಳ್ಳಲಾಗಿಲ್ಲ. ಯಾರು ಯಾವ ಕುಟುಂಬದವರು ಎಂಬುದನ್ನು ಆಧರಿಸಿ ನಮ್ಮ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದಲೇ ಬಿಜೆಪಿಯಲ್ಲಿ ಪಕ್ಷವೇ ಕುಟುಂಬ ಎಂದು ಹೇಳಲಾಗುತ್ತದೆ ಆದರೆ ಕೆಲವರಿಗೆ ಕುಟುಂಬವೇ ಪಕ್ಷದಲ್ಲಿರುತ್ತದೆ ಎಂದು ಮೋದಿ ಪ್ರಿಯಾಂಕ ವಾಧ್ರ ರಾಜಕೀಯ ಪ್ರವೇಶದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸುವ ಏಕೈಕ ಪಕ್ಷ ಬಿಜೆಪಿಯಗಿದೆ ಎಂದ ಪ್ರಧಾನಿ, “ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಪಕ್ಷದ ಕಾರ್ಯಕರ್ತರಿಂದ ಕಟ್ಟಲ್ಪಟ್ಟ ಬಿಜೆಪಿ ದೇಶಕ್ಕಾಗಿ ಕಟಿಬದ್ಧವಾಗಿದೆ. ಯಾವುದಾದರೂ ಪಕ್ಷ ಪ್ರಜಾಫ್ರಭುತ್ವವನ್ನು ಅನುಸರಿಸಿದಲ್ಲಿ ಅದು ಬಿಜೆಪಿ ಮಾತ್ರವೇ. ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿಯ ಭಾಗವಾಗಿದೆ” ಎಂದು ಹೇಳಿದ್ದಾರೆ.