ಕೇರಳ : ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ :ಬಿಷಪ್ ಫ್ರಾಂಕೋ ಮುಲ್ಲಾಕಲ್ ಆರೋಪ ಮುಕ್ತ – Vishwanews24
ಕೇರಳ : ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ :ಬಿಷಪ್ ಫ್ರಾಂಕೋ ಮುಲ್ಲಾಕಲ್ ಆರೋಪ ಮುಕ್ತ – Vishwanews24
ತಿರುವನಂತಪುರಂ:ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಎಲ್ಲಾ ಆರೋಪಗಳಿಂದ ಬಿಷಪ್ ಫ್ರಾಂಕೋ ಮುಲ್ಲಾಕಲ್ ಅವರನ್ನು ಶುಕ್ರವಾರ ಕೊಟ್ಟಾಯಂ ನ್ಯಾಯಾಲಯ ಮುಕ್ತಗೊಳಿಸಿದೆ.ಜಲಂಧರ್ ಡಯಾಸಿಸ್ನ ಮಾಜಿ ಬಿಷಪ್ ಒಳಗೊಂಡ ತೀರ್ಪು ಪ್ರಕಟಿಸುವ ಮುನ್ನ ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಹೊರಗೆ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ನ್ಯಾಯಾಲಯದಿಂದ ಹೊರ ಬರುವಾಗ ಮುಲಕ್ಕಲ್, ‘ಭಗವಂತ ಸರ್ವೋತ್ತಮ, ಸತ್ಯ ಜಯಿಸಿತು’ ಎಂದು ಹೇಳಿದರು.ತೀರ್ಪು ಪ್ರಕಟಿಸುವ ಮುನ್ನ ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯವು ಸೋಮವಾರದಂದು ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣದ ವಿಚಾರಣೆಯು ನವೆಂಬರ್ 2019 ರಲ್ಲಿ ಪ್ರಾರಂಭವಾಯಿತು. ಬಿಷಪ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು 2018 ರಲ್ಲಿ ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ದಾಖಲಿಸಿದ್ದಾರೆ.
ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಸ್ಫೋಟ ; ಸಂಜೆ 7 ಗಂಟೆ ನಂತರ ಬೀಚ್ ಪ್ರವೇಶ ನಿಷೇಧ – Vishwanews24
ಜೂನ್ 2018 ರಲ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, 2014 ಮತ್ತು 2016 ರ ನಡುವೆ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಜಲಂಧರ್ ಡಯಾಸಿಸ್ನ ಆಗಿನ ಬಿಷಪ್ ಫ್ರಾಂಕೊ ಅವರು ಲೈಂಗಿಕ ಕಿರುಕುಳ ಮಾಡಿದ್ದರು ಎಂದು ಸನ್ಯಾಸಿನಿಯರು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಬಿಷಪ್ ಅವರನ್ನು ಬಂಧಿಸಿ ಅಕ್ರಮ ಬಂಧನ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಹೊರಿಸಿತು. ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ತನ್ನ ಅನುಮತಿಯಿಲ್ಲದೆ ಪ್ರಕಟಿಸದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು.
ಉಡುಪಿ : ಕಾಂಗ್ರೆಸ್ – ಬಿಜೆಪಿಗೆ ಪ್ರತ್ಯೇಕ ಕೋವಿಡ್ ರೂಲ್ಸ್ ಏಕೆ? ರಮೇಶ್ ಕಾಂಚನ್ – Vishwanews24
