ಕೇರಳ ಪೊಲೀಸರಿಗೆ ದಿಗ್ಬಂಧನ ವಿಧಿಸಿ ಅಪಹರಿಸಿ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದ ಮಂಗಳೂರು ಮೀನುಗಾರರು..Vishwanews24

Featured, ದಕ್ಷಿಣ ಕನ್ನಡ

ಕೇರಳ ಪೊಲೀಸರಿಗೆ ದಿಗ್ಬಂಧನ ವಿಧಿಸಿ ಅಪಹರಿಸಿ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದ ಮಂಗಳೂರು ಮೀನುಗಾರರು..Vishwanews24

ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರಿನ ಮೀನುಗಾರರು ಕೇರಳ ಪೊಲೀಸರಿಗೆ ದಿಗ್ಬಂಧನ ವಿಧಿಸಿ ಅಪಹರಿಸಿದ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಮಂಗಳೂರಿನ ಮೀನುಗಾರಿಕಾ ಬೋಟು ಕೇರಳ ಸರಹದ್ದಿನ ಕುಂಬಳೆ ಪ್ರದೇಶದಲ್ಲಿ ಗಡಿದಾಟಿ ಮೀನುಗಾರಿಕೆ ನಡೆಸುತ್ತಿತ್ತು. ಈ ವೇಳೆ ಸಮುದ್ರದಲ್ಲಿ ಪಹರೆ ನಡೆಸುತ್ತಿದ್ದ ಕೇರಳ ಕರಾವಳಿ ಕಾವಲು ಪೊಲೀಸರು ಸಮುದ್ರದಲ್ಲೇ ಮಂಗಳೂರು ಬೋಟ್‌ನ್ನು ಅಡ್ಡಗಟ್ಟಿದ್ದರು. ಬಳಿಕ ಪೊಲೀಸ್‌ ಸಿಬ್ಬಂದಿ ರಘು ಮತ್ತು ಸುಧೀಶ್‌ ಎಂಬವರು ಮಂಗಳೂರು ಬೋಟ್‌ನ್ನು ಪ್ರವೇಶಿಸಿದ್ದರು.

ಮಂಗಳೂರು ಬೋಟ್‌ನಲ್ಲಿ 19 ಮಂದಿ ಮೀನುಗಾರರಿದ್ದರು. ಬೋಟ್‌ ಹಾಗೂ ಮೀನುಗಾರರ ತಪಾಸಣೆಗೆ ಮುಂದಾದಾಗ ಈ ಇಬ್ಬರು ಕೇರಳ ಪೊಲೀಸರಿಗೆ ಮಂಗಳೂರು ಬೋಟಿನ ಮೀನುಗಾರರು ಸಮುದ್ರ ಮಧ್ಯದಲ್ಲೇ ದಿಗ್ಭಂಧನ ವಿಧಿಸಿದ್ದಾರೆ. ಬಳಿಕ ಅದೇ ಸ್ಥಿತಿಯಲ್ಲಿ ಕೇರಳ ಪೊಲೀಸ್‌ ಸಿಬ್ಬಂದಿಯನ್ನು ಮಂಗಳೂರು ಬಂದರಿಗೆ ಕರೆತಂದಿದ್ದಾರೆ. ಬಳಿಕ ಬಂದರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಕೇರಳ ಗಡಿಭಾಗದಲ್ಲಿ ಅನಾಥ ಸ್ಥಿತಿಯಲ್ಲಿ ಗಸ್ತು ಬೋಟ್‌ ಕಂಡ ಇನ್ನೊಂದು ಗಸ್ತು ಬೋಟ್‌ನ ಪೊಲೀಸರು, ಮೀನುಗಾರರು ಅಪಹರಿಸಿರುವುದನ್ನು ಪತ್ತೆಮಾಡಿದ್ದಾರೆ. ಬಳಿಕ ಕೇರಳ ಪೊಲೀಸರು ಮಂಗಳೂರಿಗೆ ಆಗಮಿಸಿ ಬಿಡುಗಡೆಗೊಂಡ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿದ್ದಾರೆ. ಮಂಗಳೂರು ಬೋಟ್‌ಗೆ ಪರವಾನಗಿ ಇರಲಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಬೋಟ್‌ ವಶಕ್ಕೆ ಪಡೆಯುವ ಭೀತಿಯಲ್ಲಿ ಮೀನುಗಾರರು ಪೊಲೀಸರನ್ನೇ ಅಪಹರಿಸಿದ್ದರು. ಕಾಸರಗೋಡು ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ.

ಈ ಸಂದರ್ಭ ಮಂಗಳೂರು ಬೋಟಿನ ಮೀನುಗಾರರು ಸಮುದ್ರ ಮಧ್ಯದಲ್ಲೇ ದಿಗ್ಬಂಧನ ವಿಧಿಸಿ, ಪೊಲೀಸ್‌ ಸಿಬ್ಬಂದಿಯನ್ನು ಮಂಗಳೂರು ಮೀನುಗಾರಿಕೆ ಧಕ್ಕೆಗೆ ಕರೆತಂದಿದ್ದಾರೆ. ಮಂಜೇಶ್ವರ ಪೊಲೀಸರು ಮಂಗಳೂರಿಗೆ ಆಗಮಿಸಿ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿಅಪಹರಣ ಪ್ರಕರಣ ದಾಖಲಾಗಿದೆ.

ಗಡಿ ದಾಟಿ ಫಿಶಿಂಗ್‌ ನಡೆಸಿಲ್ಲ: ಮೀನುಗಾರರು
ಆಳಸಮುದ್ರ ಮೀನುಗಾರಿಕೆ ನಡೆಸಿ ಹಿಂದಿರುಗುವಾಗ ಮಂಜೇಶ್ವರ ಮೂಲಕ ಬರಬೇಕಾಗುತ್ತದೆ. ಆದರೆ ಅದನ್ನೇ ಉಲ್ಲಂಘನೆ ಎಂದು ಹೇಳುವುದು ಸರಿಯಲ್ಲ ಎಂದು ಮಂಗಳೂರಿನ ಮೀನುಗಾರರು ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಬೋಳೂರು ಚಂದ್ರಹಾಸ್‌ ಎಂಬವರಿಗೆ ಸೇರಿದ ಪರ್ಸಿನ್‌ ದೋಣಿ ಮಂಜೇಶ್ವರ ಬಳಿ ಬರುತ್ತಿದ್ದಾಗ ಕಾಸರಗೋಡಿನ ಕೋಸ್ಟಲ್‌ ಪೊಲೀಸ್‌ ಸಿಬ್ಬಂದಿ ಬೋಟ್‌ಗೆ ಬಂದು ಮಂಜೇಶ್ವರ ದಕ್ಕೆಗೆ ಕರೆದೊಯ್ಯಲು ಸೂಚಿಸಿದ್ದಾರೆ.