ಕೇರಳ : ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ – ನದಿಗೆ ಜಾರಿ ಬಿದ್ದ ನವ ದಂಪತಿ ; ವರ ಸಾವು, ವಧು ಗಂಭೀರ – Vishwanews24

Featured, ರಾಷ್ಟ್ರ ನ್ಯೂಸ್

ಕೇರಳ : ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ನದಿಗೆ ಜಾರಿ ಬಿದ್ದ ನವ ದಂಪತಿ ; ವರ ಸಾವು, ವಧು ಗಂಭೀರ

ಕೇರಳ: ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್‌ ನಡೆಸುವ ವೇಳೆ ನವವಿವಾಹಿತರು ಬಂಡೆಯಿಂದ ಜಾರಿ ಬಿದ್ದು ನೀರಿಗೆ ಬಿದ್ದಿದ್ದು, ಮದುಮಗ ಮೃತಪಟ್ಟು ಮದುಮಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೇರಳದ ಜಾನಕಿಕಾಡು ಬಳಿಯ ಕುಟ್ಟಿಯಾಡಿ ನದಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ರೆಜಿಲ್ ಎಂದು ಗುರುತಿಸಲಾಗಿದ್ದು, ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವ ವಧು, ವರ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದರು. ಬಂಡೆ ಮೇಲೆ ನಿಂತು ಪೋಸ್ ಕೊಡುವ ವೇಳೆ ವರ ಜಾರಿ ನದಿಗೆ ಬಿದ್ದಿದ್ದಾನೆ. ಈ ವೇಳೆ ವಧು ಕೂಡ ಕಾಲು ಜಾರಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ವಧುವನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವರ ಕೊನೆಯುಸಿರೆಳೆದ್ದಾನೆ.

ಮಾರ್ಚ್ 14 ರಂದು ದಂಪತಿಗಳು ವಿವಾಹವಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು : ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ – Vishwanews24

Leave a Reply