ಕೇರಳ ಸರ್ಕಾರ ಅಹಂಕಾರದಿಂದ ಹಿಂದುಗಳ ಮೇಲೆ ಅತ್ಯಾಚಾರ ನಡೆಸುತ್ತಿದೆ :ಅನಂತ್ ಕುಮಾರ್ ಹೆಗಡೆ

Featured, ರಾಜ್ಯ ನ್ಯೂಸ್

ಬೆಂಗಳೂರು: ಕೇರಳ ಸರ್ಕಾರ ಹಾಡಹಗಲೇ ಹಿಂದೂಗಳ ಮೇಲೆ ಅತ್ಯಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆರೋಪಿದ್ದಾರೆ.

ಕೇರಳ ರಾಜ್ಯ ಸರ್ಕಾರವು ಶಬರಿಮಲೆ ವಿವಾದವನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಹಿಂದೂಗಳ ಮೇಲೆ ಹಾಡಹಗಲೇ ‘ಅತ್ಯಾಚಾರ’ ನಡೆಸಿದೆ ಎಂದು ಅವರು ಹೇಳಿದ್ದಾರೆ. “ಜನಸಾಮಾನ್ಯರ ನಂಬಿಕೆಯನ್ನು ನೋಯಿಸದೆ ಕೇರಳ ಸರ್ಕಾರವು ರಾಜತಾಂತ್ರಿಕವಾಗಿ ಅದನ್ನು ನಿರ್ವಹಿಸಲು ಸಂಪೂರ್ಣವಾಗಿ ವಿಫಲವಾಗಿದೆ, ಈ ಮೂಲಕ ಸರ್ಕಾರ ಹಿಂದೂಗಳ ಮೇಲೆ ಹಾಡಹಗಲು ಅತ್ಯಾಚಾರ ನಡೆಸಿದೆ” ಎಂದು ಹೇಳಿಕೆ ನೀಡಿದ್ದಾರೆ.ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು ಕೇರಳ ಸಿಎಂ ಅಹಂಕಾರದಿಂದ ವರ್ತಿಸುತ್ತಿರುವುದರಿಂದಲೇ ಈ ಗೊಂದಲ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಪ್ರಿಂ ಕೋರ್ಟ್ ತೀರ್ಪು ನೀಡಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜಾವಬ್ದಾರಿ. ಜನ ಸಾಮಾನ್ಯರ ನಂಬಿಕೆಯನ್ನು ನೋಯಿಸದೇ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುನ್ನು ನೋಡಬೇಕು. ಆದರೆ ಕೇರಳ ಸರ್ಕಾರ ಈ ಪ್ರಕರಣವನ್ನು ನಿರ್ವಹಿಸಲು ಸಂಪೂರ್ಣ ವಿಫಲವಾಗಿದೆ. ಇದು ಹಿಂದೂ ಜನರ ಮೇಲೆ ಹಾಡಹಗಲೇ ನಡೆಸಿದ ಅತ್ಯಾಚಾರ ಎಂದು ಕಟು ಪದಗಳಿಂದ ಕೇರಳ ಸರ್ಕಾರದ ನಡೆಯನ್ನು ಅನಂತ್ ಕುಮಾರ್ ಹೆಗ್ಡೆ ಟೀಕಿಸಿದರು.