ಕೇಸರಿಮಯವಾದ ಮಂಡ್ಯ; ಬಿಜೆಪಿ ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದೆ ಸುಮಲತಾ ಫೋಟೋ – Vishwanews24

Featured, ರಾಜ್ಯ ನ್ಯೂಸ್

ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಅಮಿತ್ ಶಾ  ..

ಕೇಸರಿಮಯವಾದ ಮಂಡ್ಯ; ಬಿಜೆಪಿ ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದೆ ಸುಮಲತಾ ಫೋಟೋ

ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ನಗರವನ್ನು ಬಿಜೆಪಿ ಮುಖಂಡರು ಕೇಸರಿ ಮಯವಾಗಿದೆ.

ಜೊತೆಗೆ ಅಮಿತ್ ಶಾ ಅವರನ್ನು ಸ್ವಾಗತಿಸಿ ಹಾಕಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ ಫೋಟೋ ರಾರಾಜಿಸುತ್ತಿದೆ.
ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದ್ದು, ನಾಯಕರು ಅಮಿತ್ ಶಾಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ಕೂಡ ರಾರಾಜಿಸುತ್ತಿವೆ. ಅಮಿತ್ ಶಾ ಗೆ ಸ್ವಾಗತ ಕೋರಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಭಾವಚಿತ್ರವಿರುವುದು ಗಮನಸೆಳೆದಿದೆ.

ಸಂಸದೆ ಆಪ್ತ ಇಂಡವಾಳು ಸಚ್ಚಿದಾನಂದ ಸ್ವಾಗತ ಕೋರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ಫೋಟೋ ಹಾಕಲಾಗಿದೆ. ಸುಮಲತಾ ಅನುಮತಿ ಪಡೆದೆ ಬಿಜೆಪಿ ಸೇರಿರುವುದಾಗಿ ಹೇಳಿದ್ದ ಸಚ್ಚಿದಾನಂದ, ಇದೀಗ ಆಪ್ತ ಕೋರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ರಾರಾಜಿಸುತ್ತಿದ್ದಾರೆ. ನಾಳೆ 11 ಗಂಟೆಗೆ ಮಂಡ್ಯಗೆ ಹೆಲಿಕಾಪ್ಟರ್ ಮೂಲಕ ಬರಲಿರುವ ಶಾ, 11.15ಕ್ಕೆ ಗೆಜ್ಜಲಗೆರೆಯ ಮನ್‍ಮುಲ್‍ನ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ.

ಬೆಂಗಳೂರು: ಹೊಸ ವರ್ಷ ಆಚರಣೆ : ಪೊಲೀಸ್ ನಿಯಮಗಳು ಜಾರಿಗೆ  – Vishwanews24

Leave a Reply