ಕೈಕೊಟ್ಟ ಪ್ರೇಯಸಿ: ನೊಂದ ಬಾಡಿಬಿಲ್ಡರ್ ನೇಣುಬಿಗಿದುಕೊಂಡು ಆತ್ಮಹತ್ಯೆ – vishwanews24
ಕೈಕೊಟ್ಟ 3 ವರ್ಷ ಪ್ರೀತಿಸಿದ ಪ್ರೇಯಸಿ: ನೊಂದ ಬಾಡಿಬಿಲ್ಡರ್ ನೇಣುಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು: ಪ್ರೀತಿಸಿದ ಯುವತಿ ಕೈ ಕೊಟ್ಟಳು ಎಂಬ ಕಾರಣಕ್ಕೆ ರಾಜ್ಯ ಮಟಂದ ದೇಹದಾರ್ಡ್ಯ ಪಟುವೊಬ್ಬರು ಡೆತನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆ ವ್ಯಾಪ್ತಿಯ ಗೆಳೆಯರ ಬಳಗದಲ್ಲಿ ನಡೆದಿದೆ.
ಗೆಳೆಯರ ಬಳಗ ನಿವಾಸಿ ಕಿರಣ್ (26) ಆತ್ಮಹತ್ಯೆ ಮಾಡಿಕೊಂಡಿರುವ ಬಾಡಿ ಬಿಲ್ಡರ್, ಶನಿವಾರ ಸಂಜೆ ದುರ್ಘಟನೆ ನಡೆದಿದೆ. ಈ ಸಂಬಂಧ ಯುವತಿ, ಆಕೆಯ ತಾಯಿ ಮತ್ತು ಸಹೋದರನ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಿರಣ್ ರಾಜ್ಯ ಮಟ್ಟದ ಬಾಡಿಬಿಲ್ಡರ್‌ಆಗಿದ್ದು, ಸಮೀಪದ ಜಿಮ್‌ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದರು. 3 ವರ್ಷಗಳಿಂದ ಯುವತಿ ಯೊಬ್ಬಳನ್ನು ಪ್ರೀತಿಸುತ್ತಿದ್ದರು. 2 ತಿಂಗಳ ಹಿಂದೆ ಪ್ರೀತಿಸಿದ ಯುವತಿಯನ್ನು ಮನೆಗೆ ಕರೆತಂದು ಪೋಷಕರಿಗೆ ತೋರಿಸಿ ಮದುವೆ ಮಾಡಿಕೊಡುವಂತೆ ಕೋರಿದ್ದರು. ಅದಕ್ಕೆ ಪೋಷಕರು ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ, 15 ದಿನಗಳ ಹಿಂದೆ ಯುವತಿ ಮನೆಗೆ ಬಂದು ಪೋಷಕರ ಒತ್ತಾಯದ ಮೇರೆಗೆ ಬೇರೊಬ್ಬ ಯುವಕನನ್ನು ಮದುವೆಯಾಗುತ್ತಿದ್ದೇನೆ ಎಂದು ಆಹ್ವಾನ ಪತ್ರಿಕೆ ನೀಡಿದ್ದಳು. ಅಲ್ಲದೆ, ವರನ ಕಡೆಯವರು ನೀಡಿರುವ ಸೀರೆ ಎಂದು ತೋರಿಸಿದ್ದಳು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:
ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯಕ್ಕೆ ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ: ಜಿ. ಪರಮೇಶ್ವರ್ – vishwanews24
ನನ್ನ ಸಾವಿಗೆ ಯುವತಿ ಕಾರಣ: ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ
ಮನೆಯಲ್ಲಿ ಕಿರಣ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಒಂದು ಪುಟದ ಡೆತ್‌ನೋಟ್ ಬೆರದಿಟ್ಟಿದ್ದಾನೆ. ಅದರಲ್ಲಿ ಸುಮಾರು 3 ವರ್ಷಗಳಿಂದ ತುಂಬಾ ಪ್ರೀತಿಸುತ್ತಿದ್ದ ಯುವತಿ ನನಗೆ ಕೈ ಕೊಟ್ಟಿದ್ದು, ಅದರಿಂದ ಮಾನಸಿಕವಾಗಿ ಖನ್ನತೆ ಒಳಗಾಗಿದ್ದೇನೆ. ನನ್ನ ಸಾವಿಗೆ ಪ್ರೀತಿಸಿದ ಯುವತಿ, ಆಕೆಯ ತಾಯಿ ಮತ್ತು ಆಕೆಯ ಸಹೋದರನೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿತ ವ್ಯಕ್ತಿಗಳಿಗೆ ವಿಚಾರಣೆಗೆ ನೋಟಿಸ್ ಕೊಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.
