ಕೈಪುಂಜಾಲು ಮೀನುಗಾರರ ಪ್ರಾ.ವಿವಿಧೋದ್ದೇಶ ಸಹಕಾರ ಸಂಘದ ಶತಮನೋತ್ಸವ ಸಮಾರೋಪ ಸಮಾರಂಭ:ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಡಾ.ಎಂ.ಎನ್ ಆರ್ : vishwanews24

Featured, ಉಡುಪಿ

ಕೈಪುಂಜಾಲು ಮೀನುಗಾರರ ಪ್ರಾ.ವಿವಿಧೋದ್ದೇಶ ಸಹಕಾರ ಸಂಘದ ಶತಮನೋತ್ಸವ ಸಮಾರೋಪ ಸಮಾರಂಭ:ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಡಾ.ಎಂ.ಎನ್ ಆರ್ : vishwanews24


ಕಾಪು: ರಾಜ್ಯ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಕೈಪುಂಜಾಲು ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರ ಸಂಘ ನಿ ಕಾಪು ಇದರ ಶತಮನೋತ್ಸವ ಸಮಾರೊಪವು ಕೋವಿಡ್ ನಿಯಮಗಳ ಅನುಸಾರ ಕೈಪುಂಜಾಲು ಕೇಂದ್ರ ಕಚೇರಿಯ ಬಳಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅದ್ಯಕ್ಷರಾದ ಡಾ.ಎಮ್.ಎನ್ ರಾಜೇಂದ್ರ ದೀಪಬೆಳಗಿಸುವ ಮುಖಾಂತರ ಉಧ್ಘಾಟಿಸಿ ಮಾತನಾಡಿ”ಮೀನುಗಾರರು ಕಷ್ಟಜೀವಿಗಳು ಅವರಿಗೆ ಸರ್ಕಾರದಿಂದ ಹೆಚ್ಚಿನ‌ ಸಹಕಾರ ನೀಡಬೇಕಾಗಿದೆ,ಶತಮಾನೋತ್ಸವದ ಈ ಸೊಸೈಟಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಯಾಗಬೇಕು ಹಾಗೂ ಈ ಸಂಧರ್ಭದಲ್ಲಿ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶತಮನೋತ್ಸವ ಸಮಿತಿ ಸಂಚಾಲಕ ಸತೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕೆ.ರಘುಪತಿ ಭಟ್,ದ,ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ , ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ,ದ.ಕ ಮತ್ತು ಉಡುಪಿ ಜಿಲ್ಲಾ ಮೀನಿ ಮಾರಾಟ ಫೇಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ವಾಸುದೇವ ಸಾಲ್ಯಾನ್,ಬಿ.ಎನ್ ಶಂಕರ ಪೂಜಾರಿ,ಕಿಶೋರ್ ಕುಮಾರ್ ಅಂಬಾಡಿ,ಬೆಳಪು ದೇವಿಪ್ರಸಾದ್ ಶೆಟ್ಟಿ,ಕಾಪು ದಿವಾಕರ ಶೆಟ್ಟಿ,ಗಣೇಶ್ ಕೆ,ಗಣೇಶ್ ಮಯ್ಯ,ದಿವಾಕರ ಖಾರ್ವಿ , ಸಹಕಾರ ಸಂಘದ ಅಧ್ಯಕ್ಷ ಜನಾರ್ಧನ ಸಾಲ್ಯಾನ್,ಉಪಾಧ್ಯಕ್ಷ ಸುಧರ್ಮ ಶ್ರೀಯಾನ್ , ಪ್ರಧಾನ ವ್ಯವಸ್ಥಾಪಕ ಜಗದೀಶ ತಿಂಗಳಾಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ದಯಾನಂದ ಕಾರ್ಯಕ್ರಮ ನಿರೂಪಿಸಿದರು.

 

Leave a Reply