ಕೊರೊನಾ ಲಸಿಕೆಯನ್ನು ಇಡೀ ಕರ್ನಾಟಕಕ್ಕೆ ಉಚಿತವಾಗಿ ನೀಡಬೇಕು : ಐವನ್ ಡಿಸೋಜ -Vishwanews24
ಕೊರೊನಾ ಲಸಿಕೆಯನ್ನು ಇಡೀ ಕರ್ನಾಟಕಕ್ಕೆ ಉಚಿತವಾಗಿ ನೀಡಬೇಕು : ಐವನ್ ಡಿಸೋಜ -Vishwanews24
ದಕ್ಷಿಣ ಕನ್ನಡ: ಕೊರೊನಾ ಲಸಿಕೆ ಇನ್ನೇನು ಕೆಲವೇ ದಿನಗಳಲ್ಲಿ ಬರುತ್ತದೆ. ಬಂದ ಲಸಿಕೆಯನ್ನು ಇಡೀ ಕರ್ನಾಟಕಕ್ಕೆ ಉಚಿತವಾಗಿ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನ ವ್ಯಾಕ್ಸಿನನ್ನು ಕೊರೋನ ಸಂಧರ್ಭದಲ್ಲಿ ಕೆಲಸ ಮಾಡಿದ ವೈದ್ಯರಿಗೆ ಹಾಗೂ ಪ್ರೆಂಟ್ ಲೈನರ್ಸ್ಗೆ ಉಚಿವಾಗಿ ನೀಡುತ್ತೀರಿ.. ಅದೇ ರೀತಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಬೇಕು. ವ್ಯಾಕ್ಸಿನ್ ಕೊಡುವ ಸಂದರ್ಭದಲ್ಲಿ ಎಪಿಎಲ್-ಬಿಪಿಎಲ್ ಎಂದು ತಾಳೆ ಹಾಕದೆ ವ್ಯಾಕ್ಸಿನನ್ನು ಎಲ್ಲಾ ಜನರಿಗೂ ನೀಡಬೇಕು ಎಂದು ಐವನ್ ಡಿಸೋಜ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು, ಈ ವೇಳೆ ಕೊರೋನ ಕಾರಣದಿಂದ ಉಂಟಾದ ಲಾಕ್ಡೌನ್ ಸಮಯದಲ್ಲಿ ರಸ್ತೆ ಬದಿಗಳಲ್ಲಿ ವ್ಯಾಪಾರಗಳನ್ನು ಕಳೆದುಕೊಂಡವರಿಗೆ ತಮ್ಮ ದಿನ ನಿತ್ಯದ ಕೆಲಸಗಳನ್ನು ಮಾಡಲು ತಳ್ಳು ಗಾಡಿಯನ್ನು ಉಚಿಯವಾಗಿ ನೀಡಲಾಯಿತು. ಈ ತಳ್ಳುಗಾಡಿಗಳನ್ನು ಕಾಂಗ್ರೆಸ್ ಮುಖಾಂತರ ವಿವೇಕ್ ರಾಜ್ ಎಂಬವರು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
