ಕೊರೋನಾ 2ನೇ ಅಲೆ ಭೀತಿ : ಬೆಂಗಳೂರಿನಲ್ಲಿ ಮಾರ್ಚ್ 31ರವರೆಗೆ ನೈಟ್ ಪಾರ್ಟಿ ಬ್ಯಾನ್ -Vishwanews24
ಕೊರೋನಾ 2ನೇ ಅಲೆ ಭೀತಿ : ಬೆಂಗಳೂರಿನಲ್ಲಿ ಮಾರ್ಚ್ 31ರವರೆಗೆ ನೈಟ್ ಪಾರ್ಟಿ ಬ್ಯಾನ್ -Vishwanews24
ಬೆಂಗಳೂರು : ರಾಜ್ಯದಲ್ಲಿ ಈಗ ಮಹಾರಾಷ್ಟ್ರ ಕೊರೋನಾ ವೈರಸ್ ಭೀತಿ ಉಂಟಾಗಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ, ಕೊರೋನಾ 2ನೇ ಅಲೆಯ ಭೀತಿ ಶುರುವಾಗಿದೆ. ಇದರಿಂದಾಗಿ ಕೊರೋನಾ ಕಂಟ್ರೋಲ್ ಗಾಗಿ ಕಠಿಣ ಕ್ರಮ ಕೈಗೊಂಡಿರುವಂತ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಮಾರ್ಚ್ 31ರವರೆಗೆ ನೈಟ್ ಪಾರ್ಟಿ ಬ್ಯಾನ್ ಮಾಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಕೊರೋನಾ ಕಂಟ್ರೋಲ್ ಗೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ಕೊರೋನಾ 2ನೇ ಅಲೆಯನ್ನು ಕಂಟ್ರೋಲ್ ಮಾಡುವ ಸಲುವಾಗಿ, ಇದೀಗ ಮಾರ್ಚ್ 31ರವರೆಗೆ ನೈಟ್ ಪಾರ್ಟಿಗಳಿಗೆ ಬ್ರೇಕ್ ಹಾಕಿದೆ.
ಮಾರ್ಚ್ 31ರವರೆಗೆ ಬೆಂಗಳೂರಿನಲ್ಲಿ ಈ ಟಫ್ ರೂಲ್ಸ್ ಜಾರಿಗೊಳಿಸಿರುವಂತ ಸರ್ಕಾರ, ಲೇಟ್ ನೈಟ್ ಪಾರ್ಟಿಗಳಿಗೆ ಬ್ರೇಕ್ ಹಾಕಿದೆ. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ ನಡೆಸಲಾಗುತ್ತಿದ್ದಂತ ಲೇಟ್ ನೈಟ್ ಪಾರ್ಟಿಗಳಿಗೆ ನಿಷೇಧ ಹೇರಿದ್ದು, ಈ ಮೂಲಕ ಕೊರೋನಾ ಕಂಟ್ರೋಲ್ ಗೆ ಮುಂದಾಗಿದೆ.
ಮಂಗಳೂರು: ಗಿಳಿಗಳ ಮೂಲಕ ಶಾಸ್ತ್ರ ಹೇಳುತ್ತಿದ್ದ ಐವರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು -Vishwanews24
