ಕೊರೋನಾ ಲಸಿಕೆ ಹಂಚಿಕೆ ವಿತರಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ -Vishwanews24
ಕೊರೋನಾ ಲಸಿಕೆ ಹಂಚಿಕೆ ವಿತರಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ -Vishwanews24
ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಯಲ್ಲಿಯೂ ಕರ್ನಾಟಕ ಪ್ರಥಮ ಸ್ಥಾನ ಪಡೆದಿದ್ದು, ದೇಶದಲ್ಲಿಯೇ ಮುಂಚೂಣಿಯಲ್ಲಿರೊ ನಾಡು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದ್ರಂತೆ, ನಾಲ್ಕೇ ನಾಲ್ಕು ದಿನಗಳಲ್ಲಿ 80,696 ಜನರಿಗೆ ಲಸಿಕೆ ಹಾಕಲಾಗಿದೆ.
ಅಂಕಿ ಅಂಶಗಳ ಪ್ರಕಾರ ನೋಡೋದಾದ್ರೆ, ಮಂಗಳವಾರ ಒಂದೇ ದಿನ 15,223 ಜನರಿಗೆ ಲಸಿಕೆ ನೀಡಲಾಗಿದೆ. ಒಟ್ಟು 356 ಕೇಂದ್ರಗಳಲ್ಲಿ 32,205 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, 346 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಯಿತು. ಈವರೆಗೆ ಶೇ.47ರಷ್ಟು ಲಸಿಕೆ ಗುರಿ ಸಾಧಿಸಲಾಗಿದೆ.
ಇನ್ನು ಕರ್ನಾಟಕದ ನಂತರದ 2ನೇ ಸ್ಥಾನ ಆಂಧ್ರಪ್ರದೇಶಕ್ಕೆ ತಕ್ಕಿದ್ದು, ಇಲ್ಲಿ 46,680 ಜನರಿಗೆ ಲಸಿಕೆ ನೀಡಲಾಗಿದೆ. ಅದ್ರಂತೆ, ಒಡಿಶಾ 46,506, ಬಿಹಾರ 33,389, ಪಶ್ಚಿಮ ಬಂಗಾಳ 29,866, ರಾಜಸ್ಥಾನ 23,546, ಉತ್ತರ ಪ್ರದೇಶದಲ್ಲಿ 22,644 ಜನರಿಗೆ ಲಸಿಕೆ ನೀಡಲಾಗಿದೆ.
ಈ ಕುರಿತು ಸ್ವತಃ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದು, ‘ಕೋವಿಡ್ ನಿಯಂತ್ರಣ ಸಂದರ್ಭದಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿತ್ತು. ಈಗ ಲಸಿಕೆಯಲ್ಲೂ ನಮ್ಮ ರಾಜ್ಯ ಮುಂದಿದೆ. ಮೊದಲೇ ಯೋಜನೆ ರೂಪಿಸಿ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿರುವುದು, ಎಲ್ಲ ಮೆಡಿಕಲ್ ಕಾಲೇಜುಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿದ್ದರಿಂದ ಲಸಿಕೆ ಹಂಚಿಕೆಯಲ್ಲಿ ಗೊಂದಲವಾಗಿಲ್ಲ. ಡ್ರೈರನ್ ಸಂದರ್ಭದಲ್ಲಿಯೂ ಯಾವುದೇ ಗೊಂದಲ ಆಗಲಿಲ್ಲ’ ಎಂದರು.
