ಕೊಲೆ ಪ್ರಕರಣ : ಕಮಲಾಕರ್ ಭಟ್ ಸೇರಿ ಐವರಿಗೆ ಫೆ.21 ರವರೆಗೆ ನ್ಯಾಯಾಂಗ ಬಂಧನ – vishwanews24

Featured, ರಾಜ್ಯ ನ್ಯೂಸ್

ಕೊಲೆ ಪ್ರಕರಣ : ಕಮಲಾಕರ್ ಭಟ್ ಸೇರಿ ಐವರಿಗೆ ಫೆ.21 ರವರೆಗೆ ನ್ಯಾಯಾಂಗ ಬಂಧನ

ಕಾರವಾರ: ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್‌ನಿಂದ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಕಮಲಾಕರ ಭಟ್ ಮತ್ತು ಸುಚಿತ್ರಾಗೆ ಫೆಬ್ರುವರಿ 21 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಸಿದ್ದಾಪುರ JMFC ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಎಂ.ಪಿ ಅವರು ಆದೇಶ ಹೊರಡಿಸಿದ್ದಾರೆ.

8 ಆರೋಪಿಗಳ ಪೈಕಿ A5 ಆರೋಪಿ ಮಹ್ಮದ್ ಮೆಹಫೂಪ್, A6 ಆರೋಪಿ ಮಹ್ಮದ್ ಫೈಸಲ್, A7 ಆರೋಪಿ ಇರ್ಫಾನ್‌ಗೆ ಪೊಲೀಸ್ ಕಸ್ಟಡಿ ಇರುವ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನ ಫೆ.13 ಕ್ಕೆ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: 

ಬಿಜೆಪಿ ನಾಯಕನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ – vishwanews24

ಉಳಿದ 5 ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದು, A1 ಆರೋಪಿ ಸುಚಿತ್ರಾ, A2-ಲೋಕನಾಥ್, A3-ಕಮಲಾಕರ ಭಟ್, A4 -ಆಕಾಶ ಮತ್ತು A8 ವಿನಯ್‌ಗೆ ಫೆ.21 ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ.

ಉಳಿದ ಮೂರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಮಹಜರು ಸೇರಿದಂತೆ ಹತ್ಯೆ ಮಾಡಿದ ಮಾರಕಾಸ್ತ್ರಗಳನ್ನ ಪತ್ತೆಗಾಗಿ ಪೊಲೀಸರ ವಶದಲ್ಲೇ ಶಿವಮೊಗ್ಗಕ್ಕೆ ಸಿದ್ದಾಪುರ ಪೊಲೀಸರು ಕರೆದೊಯ್ದಿದ್ದು ಫೆ.13 ರಂದು ಸಿದ್ದಾಪುರ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

Leave a Reply