ಕೋಟ ಅವಳಿ ಕೊಲೆ : ನ್ಯಾಯಕ್ಕಾಗಿ ದೇವರ ಮೊರೆ ; ಸಾಮೂಹಿಕ ಪ್ರಾರ್ಥನೆ ಹಾಗೂ ಹುಯಿಲು ಸೇವೆ – Vishwanews24

Featured, ಉಡುಪಿ

ಕುಂದಾಪುರ: ಕೋಟ ಮಣೂರಿನ ಚಿಕ್ಕಿನಕೆರೆ ಸಮೀಪ ಲೋಹಿತ್ ಪೂಜಾರಿಯ ಮನೆಯಂಗಳದಲ್ಲಿ ರೌಡಿ ಶೀಟರ್ ರಾಜಶೇಖರ ರೆಡ್ಡಿ ಮತ್ತು ಆತನ ತಂಡದವರಿಂದ ಕೊಲೆಯಾದ ಯತೀಶ್ ಕಾಂಚನ್ ಹಾಗೂ ಭರತ್ ಶ್ರೀಯಾನ್ರ ಹತ್ಯೆಗೈದವರಿಗೆ ಕಠಿಣ ಶಿಕ್ಷೆ ಕೋರಿ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾತಿ ದಿನದ ಅಂಗವಾಗಿ ಕೋಟದ ನಾಗರೀಕರು ಸೇರಿದಂತೆ ಮೃತರ ಕುಟುಂಬಿಕರು ಸಾಮೂಹಿಕ ಪ್ರಾರ್ಥನೆ ಹಾಗೂ ಹುಯಿಲು ಸೇವೆಯನ್ನು ನೀಡಿದ್ದಾರೆ.

ಕಳೆದ ಹಲವು ದಿನಗಳ ಹಿಂದೆ ಇದೇ ವಿಚಾರವಾಗಿ ಕೋಟ ಬಸ್ಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತರು ಸಾಮೂಹಿಕ ಪ್ರಾರ್ಥನೆ ಹಾಗೂ ಸಂಕ್ರಾತಿ ದಿನದಂದು ಹುಯಿಲು ಸೇವೆ ನೀಡುವುದಾಗಿ ಘೋಷಿಸಿದ್ದರು ಅದರಂತೆ ಬುಧವಾರ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ಹುಯಿಲು ಸೇವೆ ನಡೆಯಿತು.

ಕೋಟದ ನಾಗರೀಕರು ಸೇರಿದಂತೆ ಹತ್ಯೆಯಾದ ಕುಟುಂಬಿಕರು ದೇವರಲ್ಲಿ ಪ್ರಾರ್ಥಿಸಿ ನಿನ್ನ ಸನ್ನಿಧಾನದಲ್ಲಿ ಈ ರೀತಿಯ ಎರಡು ಕೊಲೆಗಳಾಗಿವೆ ಇಂಥಹ ಕೃತ್ಯಗಳಿಗೆ ನಿನ್ನ ಸಾನಿಧ್ಯದಲ್ಲಿ ಎಡೆ ಉಂಟೆ ಎಂದು ಕೇಳಿದಾಕ್ಷಣ ಶ್ರೀ ದೇವರ ನುಡಿಯಂತೆ ನನ್ನ ಸನ್ನಿಧಾನದಲ್ಲಿ ಈ ರೀತಿಯ ಕೃತ್ಯ ಎಸಗಿದ ರಾಕ್ಷಸರಿಗೆ ಖಂಡಿತವಾಗಿಯೂ ಬಿಡಲಾರೆ ತನ್ನ ಮಖದ ಛಾಯೇಗೆ ರಕ್ತದೋಕುಳಿ ಹರಿಸಿದವರ ಮಗ್ಗಲು ಮುರಿಯಲು ಈ ಹಂತದಲ್ಲೆ ಗಣಗಳನ್ನು ಬಿಟ್ಟಿದ್ದೇನೆ ಇದಕ್ಕೆಲ್ಲ ನ್ಯಾಯ ದೊರಕಿಸುತ್ತೇನೆ ಎಂದು ನುಡಿಯಿತ್ತಿತು. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಲ್ಲೂ ಇದೇ ರೀತಿ ದೇವರಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.