ಕ್ಯಾಂಡಿ ಪ್ಯಾಕೆಟ್ ನಲ್ಲಿ ಡ್ರಗ್ಸ್ ಸಾಗಣೆ : ಬೆಂಗಳೂರು ಏರ್​ಪೋರ್ಟಲ್ಲಿ ಇಬ್ಬರ ಬಂಧನ – vishwanews24

Featured, ರಾಜ್ಯ ನ್ಯೂಸ್

ಕ್ಯಾಂಡಿ ಪ್ಯಾಕೆಟ್ ನಲ್ಲಿ ಡ್ರಗ್ಸ್ ಸಾಗಣೆ : ಬೆಂಗಳೂರು ಏರ್​ಪೋರ್ಟಲ್ಲಿ ಇಬ್ಬರ ಬಂಧನ

ಬೆಂಗಳೂರು : ಅಕ್ರಮವಾಗಿ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನ ಲಗೇಜ್ ಬ್ಯಾಗ್ ಮೇಲೆ ಅನುಮಾನಪಟ್ಟ ನಂತರ ತೀವ್ರ ತಪಾಸಣೆ ನಡೆಸಿದರು. ಪರಿಶೀಲನೆ ವೇಳೆ ಲಗೇಜ್ ಬ್ಯಾಗ್ನ ಮಿಠಾಯಿ ಮತ್ತು ಕ್ಯಾಂಡಿ ಪ್ಯಾಕೆಟ್ಗಳಲ್ಲಿ 1.7 ಕೆಜಿ ಹಶೀಶ್ ಮತ್ತು ಚರಸ್ ಮಾದಕ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.

ಆರೋಪಿಯು ಬ್ಯಾಂಕಾಕ್-ಬೆಂಗಳೂರಿಗೆ ಆಗಮಿಸಿದ್ದ ಈ ವೇಳೆ ಆತನ ನಡವಳಿಕೆಯ ಮೇಲೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಮಾದಕ ವಸ್ತು ಸಾಗಿಸುತ್ತಿರುವುದು ಪತ್ತೆಯಾಗಿದೆ.

 ಇದನ್ನೂ ಓದಿ:

ಬೆಳ್ತಂಗಡಿ : ಚಿನ್ನಾಭರಣ ತೊಳೆದು ಕೊಡುವುದಾಗಿ ನಂಬಿಸಿ ಚಿನ್ನದ ಸರ ಕರಗಿಸಿ ವಂಚನೆ – vishwanews24

ಇನ್ನು ಕಸ್ಟಮ್ ಅಧಿಕಾರಿಗಳು ಆರೋಪಿಯ ಮೇಲೆ ಎನ್.ಡಿ.ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Leave a Reply