ಕ್ಷುಲ್ಲಕ ಕಾರಣ ಕಾಂಗ್ರೆಸ್ ಬೆಂಬಲಿತ ಉದ್ಯಾವರ ಪಂಚಾಯತ್ ಸದಸ್ಯನಿಂದ ಬಿಜೆಪಿ ಕಾರ್ಯಕರ್ತನಿಗೆ ಸೋಡಾ ಬಾಟಲಿಯಿಂದ ತಲೆಗೆ ಹಲ್ಲೆ- ಆಸ್ಪತ್ರೆಗೆ ದಾಖಲು:Vishwanews24
ಕ್ಷುಲ್ಲಕ ಕಾರಣ ಕಾಂಗ್ರೆಸ್ ಬೆಂಬಲಿತ ಉದ್ಯಾವರ ಪಂಚಾಯತ್ ಸದಸ್ಯನಿಂದ ಬಿಜೆಪಿ ಕಾರ್ಯಕರ್ತನಿಗೆ ಬಾಟಲಿಯಿಂದ ಹಲ್ಲೆ- ಆಸ್ಪತ್ರೆಗೆ ದಾಖಲು:Vishwanews24
ಕಾಪು: ಕ್ಷುಲ್ಲಕ ಕಾರಣದಿಂದ ಮಾತಿಗೆ ಮಾತು ಬೆಳೆದು ಯುವಕರ ನಡುವೆ ಜಗಳ ಆರಂಭವಾಗಿ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ.

ಮಧ್ಯಾಹ್ನದಿಂದ ಒಟ್ಟಿಗೆ ಇಬ್ಬರು ಯುವಕರು ಒಟ್ಟಿಗಿದ್ದರು ಸಂಜೆಯಾಗುತ್ತಿದ್ದಂತೆ ಮಾತಿಗೆ ಮಾತು ಬೆಳೆದು ಜಗಳವಾಡಿ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಉದ್ಯಾವರ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಿಥೇಶ್ ಪೂಜಾರಿಯಿಂದ ಬಿಜೆಪಿ ಕಾರ್ಯಕರ್ತ ನಿಶು ಕರ್ಕಡ ಮೇಲೆ ಸೋಡಾ ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿದ ಎನ್ನಲಾಗುತ್ತಿದೆ.

ಗಾಯಗೊಂಡ ನಿಶು ಕರ್ಕಡ ಉಡುಪಿಯ ಖಾಸಾಗಿ ಆಸ್ಪತ್ರೆಗೆ ದಾಖಲಾಗಿದ್ದು ಕಾಪು ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗುತ್ತಿದೆ.
