ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕಾರ್ಯ ನಿರ್ವಹಿಸಲಾಗುತ್ತಿದೆ : ಸಚಿವ ಎಸ್.ಅಂಗಾರ – VIshwanews24

Featured, ದಕ್ಷಿಣ ಕನ್ನಡ

ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕಾರ್ಯ ನಿರ್ವಹಿಸಲಾಗುತ್ತಿದೆ : ಸಚಿವ ಎಸ್.ಅಂಗಾರ

ಸುಬ್ರಹ್ಮಣ್ಯ : ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕಾರ್ಯ ನಿರ್ವಹಿಸಲಾಗುತ್ತಿದೆ. ಅಪಪ್ರಚಾರ ಮಾಡುವವರು ಇದ್ದಾರೆ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಮಾಧ್ಯಮದವರೂ ಬರೆಯುತ್ತಾರೆ, ಅವರು ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ.

ಕೆಲವೊಮ್ಮೆ ಆದ ಕೆಲಸವನ್ನು ಬರೆಯದೆ ಬಿಟ್ಟು ಬಿಡುತ್ತಾರೆ. ಅದೇ ಮಾದ್ಯಮದವರು ಮತ್ತು ಇತರರು ವಾಟ್ಸಪ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತ್ರವೇ ಬರೆಯುತ್ತಾರೆ. ಆದ ಕೆಲಸಗಳ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಮಾಧ್ಯಮಗಳ ಮೇಲೆಯೇ ಹರಿಹಾಯ್ದಿದ್ದಾರೆ.

ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾರೀ ಮಳೆಗೆ ಸಂಭವಿಸಿರುವ ಮಳೆ ಹಾನಿ ಪ್ರದೇಶಗಳಿಗೆ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಲ್ಲಿ ಶೀಘ್ರ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದರು.

ಭಾರತಕ್ಕೂ ಕಾಲಿಟ್ಟ ಮಂಕಿಪಾಕ್ಸ್  : ಕೇರಳದಲ್ಲಿ ಮೊದಲ ಪ್ರಕರಣ ದಾಖಲು- Vishwanews24

Leave a Reply