ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು  ಹೃದಯಾಘಾತದಿಂದ ನಿಧನ  – Vishwanews24

Featured, ರಾಷ್ಟ್ರ ನ್ಯೂಸ್

ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು  ಹೃದಯಾಘಾತದಿಂದ ನಿಧನ 

ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು  ಹೃದಯಾಘಾತದಿಂದ ನಿಧನರಾಗಿದ್ದಾರೆ ಮಲಯಾಳಂ, ತೆಲುಗು, ಹಿಂದಿ, ತಮಿಳು ಸೇರಿದಂತೆ ನಾನಾ ಭಾಷೆಯ ಸಿನಿಮಾಗಳಿಗೆ ಕೆಲಸ ಮಾಡಿದ್ದ ಹೆಗ್ಗಳಿಕೆ ಇವರದ್ದು. 50ರ ವಯಸ್ಸಿನ ಸುನಿಲ್ ಬಾಬು ಕೇರಳದ ಎರ್ನಾಕುಳಂನಲ್ಲಿ ವಾಸಿಸುತ್ತಿದ್ದರು. ಮನೆಯಲ್ಲೇ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಈಗಷ್ಟೇ ಅವರು ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ವಾರಿಸು ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಮೂರ್ನಾಲ್ಕು ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಗಜನಿ, ಉರುಮಿ ಸೇರಿದಂತೆ ನೂರಾರು ಚಿತ್ರಗಳಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ವಿಭಿನ್ನವಾಗಿ, ಬೃಹತ್ ಸೆಟ್ ಹಾಕುವುದರಲ್ಲಿ ಪರಿಣಿತಿ ಪಡೆದಿದ್ದ ಸುನಿಲ್ ಬಾಬು ಅವರಿಗೆ 2005ರಲ್ಲಿ ಅನಂತ ಭದ್ರ ಸಿನಿಮಾಗಾಗಿ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ಕೂಡ ದೊರೆತಿದೆ.

ಕರಾವಳಿ ಬಿಜೆಪಿಯ ಬಹುತೇಕ ಖಚಿತಗೊಂಡ ಅಭ್ಯರ್ಥಿಗಳ ಪಟ್ಟಿ:ಲಾಲಾಜಿ-ರಘುಪತಿಭಟ್-ಸುಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಔಟ್-ಉಮನಾಥ್ , ವೇದವ್ಯಾಸ ಕಾಮತ್,ಹಾಲಾಡಿ ಡೌಟ್

ಸುನಿಲ್ ಅವರ ಸಾವಿನ ಸುದ್ದಿಗೆ ಚಿತ್ರರಂಗ ಕಂಬಿನಿ ಮಿಡಿದಿದ್ದು, ದುಲ್ಕರ್ ಸಲ್ಮಾನ್ ಭಾವುಕರಾಗಿಯೇ ಇವರ ಬಗ್ಗೆ ಸುದೀರ್ವಾಗಿ ನೆನಪುಗಳನ್ನು ಬರೆದಿಕೊಂಡಿದ್ದಾರೆ. ನಿಮ್ಮ ಪ್ರತಿಭೆಗೆ ನೀವು ಸಾಟಿ, ನಿಮ್ಮ ಕುಟುಂಬಕ್ಕೆ ಈ ನೋವು ಭರಿಸುವಂತಹ ಶಕ್ತಿ ಸಿಗಲಿ ಎಂದು ಅವರು ಬರೆದಿದ್ದಾರೆ.

Leave a Reply