ತೆಲುಗು ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು – Vishwanews24
ಖ್ಯಾತ ‘ತೆಲುಗು ನಟ ನಂದಮೂರಿ ಬಾಲಕೃಷ್ಣ’ ಆಸ್ಪತ್ರೆಗೆ ದಾಖಲು – Vishwanews24
ಹೈದರಾಬಾದ್: ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಹಲವು ದಿನಗಳಿಂದ ತೀವ್ರ ಭುಜದ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಇಂದು ಹೈದರಾಬಾದಿನ ಬಂಜಾರ ಹಿಲ್ಸ್ ನಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭುಜದ ನೋವು ಇಂದು ನಿನ್ನೆಯದಲ್ಲ. ಬಹಳ ದಿನಳಿಂದಲೇ ಬಾಲಯ್ಯ ಭುಜದ ನೋವಿನಿಂದ ಬಳಲಿದ್ದಾರೆ. ಸಿನಿಮಾದ ಕೆಲಸ ಇರೋ ಕಾರಣ ಭುಜದ ನೋವಿನ ಶಸ್ತ್ರ ಚಿಕಿತ್ಸೆ ಮಾಡಿಸಿರಲಿಲ್ಲ.ಆದರೆ ನೋವು ತೀವ್ರವಾದ ಕಾರಣ, ಈಗ ವೈದ್ಯ ಡಾ.ಬಿ.ಎಸ್.ಪ್ರಸಾದ್ ನೇತೃತ್ವದಲ್ಲಿ ನಾಲ್ಕು ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
