ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ :ಇಬ್ಬರ ಶವ ಪತ್ತೆ, ಹಲವರು ನಾಪತ್ತೆ – vishwanews24
ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ :ಇಬ್ಬರ ಶವ ಪತ್ತೆ, ಹಲವರು ನಾಪತ್ತೆ
ಪಾಟ್ನಾ : ಬಿಹಾರದ ಪಾಟ್ನಾ ಸಮೀಪದ ಉಮಾನಾಥ್ ಗಂಗಾ ಘಾಟ್ ಬಳಿ ಭೀಕರ ದೋಣಿ ದುರಂತ ಸಂಭವಿಸಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗಂಗಾ ನದಿಯಲ್ಲಿ ಸಣ್ಣ ದೋಣಿ ಪಲ್ಟಿಯಾದ ಪರಿಣಾಮ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಮಾಹಿತಿಯ ಪ್ರಕಾರ, ದೋಣಿಯಲ್ಲಿ ಸುಮಾರು 14ರಿಂದ 15 ಮಂದಿ ಪ್ರಯಾಣಿಸುತ್ತಿದ್ದರು. ಬಲವಾದ ಗಾಳಿ ಮತ್ತು ನದಿಯ ಅಲೆಗಳ ಪರಿಣಾಮ ದೋಣಿ ನಿಯಂತ್ರಣ ತಪ್ಪಿ ಮುಳುಗಿದೆ ಎನ್ನಲಾಗಿದೆ. ಘಟನೆ ವೇಳೆ ಕೆಲವರನ್ನು ಸ್ಥಳೀಯರು ಮತ್ತು ಇನ್ನೊಂದು ದೋಣಿಯ ಸಹಾಯದಿಂದ ರಕ್ಷಿಸಲಾಗಿದೆ.
ಇದನ್ನೂ ಓದಿ:
ಎಸ್ಡಿಆರ್ಎಫ್ ಸಿಪಿಐ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24
ಆದರೆ ಇನ್ನೂ ಸುಮಾರು ಏಳು ಮಂದಿ ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಪ್ರಸ್ತುತ ಎಷ್ಟು ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಘಟನೆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
