ಗಣರಾಜ್ಯೋತ್ಸವ ಪರೇಡ್‍ನಲ್ಲಿ 13 ವರ್ಷಗಳ ಬಳಿಕ ಈ ಬಾರಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ – Vishwanews24
ಗಣರಾಜ್ಯೋತ್ಸವ ಪರೇಡ್‍ನಲ್ಲಿ 13 ವರ್ಷಗಳ ಬಳಿಕ ಈ ಬಾರಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ
ಬೆಂಗಳೂರು: ಸತತ 13 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಥಬ್ಧಚಿತ್ರದಲ್ಲಿ ಪ್ರದರ್ಶಿಸುತ್ತಿದ್ದ ಕರ್ನಾಟಕವು ಈ ಬಾರಿ ಅವಕಾಶವನ್ನು ಕಳೆದುಕೊಂಡಿದೆ.
ರಾಜ್ಯ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. 2023ರ ಗಣರಾಜ್ಯೋತ್ಸವದಂದು ಕರ್ನಾಟಕವು ರಾಗಿ ವೈವಿಧ್ಯತೆಯ ಕುರಿತು ಪ್ರದರ್ಶನ ನೀಡುವುದಾಗಿ ಸಲ್ಲಿಸಿದ್ದ ಪ್ರಸ್ತಾಪವನ್ನು ಕೇಂದ್ರವು ತಿರಸ್ಕರಿಸಿದೆ. ಇದರ ಪರಿಣಾಮವಾಗಿ ಜನವರಿ 26ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ದಿನದಂದು ಪರೇಡ್‍ನಲ್ಲಿ ಕರ್ನಾಟಕ 13 ವರ್ಷಗಳ ನಂತರ ಪ್ರತಿನಿಧಿಸುತ್ತಿಲ್ಲ ಎಂದು ತಿಳಿಸಿದರು.
ತಜ್ಞರ ಸಮಿತಿಯ ಮೊದಲ ಕೆಲವು ಸುತ್ತಿನ ಮೌಲ್ಯಮಾಪನದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ವಿಷಯಾಧಾರಿತ ವಿನ್ಯಾಸ ಹಾಗೂ ಸಂಗೀತವು ಮೆಚ್ಚುಗೆಯನ್ನು ಪಡೆದಿತ್ತು. ಆದರೆ ಕೊನೆಯ ಸುತ್ತಿನಲ್ಲಿ ಕರ್ನಾಟಕದ ಸ್ಥಬ್ಧಚಿತ್ರನ್ನು ತಿರಸ್ಕರಿಸಲಾಗಿದೆ. ಅಲ್ಲದೇ ಇತರ ರಾಜ್ಯಗಳು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕೆಲವೇ ರಾಜ್ಯಗಳಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಕರ್ನಾಟಕವು ಸ್ಥಬ್ಧಚಿತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿತ್ತು. ಅಷ್ಟೇ ಅಲ್ಲದೇ ಕೆಲವು ಸೃಜನಶೀಲ ಹಾಗೂ ವರ್ಣರಂಜಿತ ಸ್ಥಬ್ಧಚಿತ್ರಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ. 2022ರ ಗಣರಾಜ್ಯೋತ್ಸವದಂದು ಕರ್ನಾಟಕ ಪ್ರದರ್ಶಿಸಿದ್ದ ಸ್ಥಬ್ಧ ಚಿತ್ರಕ್ಕೆ 2ನೇ ಸ್ಥಾನ ಪಡೆದಿತ್ತು. ರಾಜ್ಯವು ಹೆಚ್ಚಾಗಿ ಜಾನಪದ, ಜೀವವೈವಿಧ್ಯ, ಕರಕುಶಲ ಈ ರೀತಿಯ ವಿಷಯವನ್ನೆ ಹೆಚ್ಚು ಕೇಂದ್ರಿಕರಿಸುತ್ತಾ ಬಂದಿದೆ.
ಉಡುಪಿ : ಭಯೋತ್ಪಾದನೆ ವಿಷಯದಲ್ಲಿ ಶಾಸಕ ರಘುಪತಿ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು: ಅಮೃತ್ ಶೆಣೈ – Vishwanews24
2022ರ ಗಣರಾಜ್ಯೋತ್ಸವದಲ್ಲಿ ಕೇರಳ ಸಲ್ಲಿಸಿದ್ದ ನಾರಾಯಣಗುರು ಸ್ಥಬ್ಧ ಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ನಾರಾಯಣಗುರು ಅನುಯಾಯಿಗಳ ಕೆಂಗಣ್ಣಿಗೆ ಕೇಂದ್ರ ಸರ್ಕಾರ ಗುರಿಯಾಗಿತ್ತು. ಇದೀಗ ಆದರೆ ಪ್ರತಿಬಾರಿ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ತಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
