ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರು ಟ್ಯಾಬ್ಲೋ ಸೇರ್ಪಡೆ ಮಾಡಲು ಪ್ರಧಾನಿಗೆ ಸಿಎಂ ಪಿಣರಾಯಿ ಒತ್ತಾಯ – Vishwanews24

Featured, ರಾಷ್ಟ್ರ ನ್ಯೂಸ್

ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರು ಟ್ಯಾಬ್ಲೋ ಸೇರ್ಪಡೆ ಮಾಡಲು ಪ್ರಧಾನಿಗೆ ಸಿಎಂ ಪಿಣರಾಯಿ ಒತ್ತಾಯ – Vishwanews24

ನಾರಾಯಣ ಗುರು ಸ್ತಬ್ಧಚಿತ್ರವು ಯುವ ಪೀಳಿಗೆಗೆ ಅಮೂಲ್ಯ ಸಂದೇಶವನ್ನು ಸಾರಲಿದೆ..

ತಿರುವನಂತಪುರ : ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಕೇರಳ ಸ್ತಬ್ಧಚಿತ್ರವನ್ನು ಸೇರ್ಪಡೆ ಮಾಡಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.

ಟ್ಯಾಬ್ಲೋವನ್ನು ಸೇರಿಸಲು ತುರ್ತು ಹಸ್ತಕ್ಷೇಪವನ್ನು ಕೋರಿ ಪ್ರಧಾನಿಗೆ ಸಿಎಂ ಪಿಣರಾಯಿ ಪತ್ರ ಬರೆದು ಒತ್ತಾಯಿಸಿದ್ದಾರೆ.

ಉಡುಪಿ :ವಿದ್ಯಾರ್ಥಿಗಳ ಹಿಜಾಬ್ ಧಾರಣೆ ಅಶಿಸ್ತು ಎಂಬ ಶಿಕ್ಷಣ ಸಚಿವರ ಹೇಳಿಕೆ ಖಂಡನಾರ್ಹ :  ಜಿಲ್ಲಾ ಮುಸ್ಲಿಮ್ ಒಕ್ಕೂಟ – Vishwanews24

‘ಪ್ರಸ್ತಾವಿತ ಸ್ತಬ್ಧಚಿತ್ರವು ಪ್ರಬಲ ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ. ಸಮಕಾಲೀನ ಸಾಮಾಜಿಕ ಸನ್ನಿವೇಶದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಕೇರಳದ ನವೋದಯ ಚಳುವಳಿಯನ್ನು ಮುನ್ನಡೆಸಿದ ಮಹಾನ್ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಚಿಂತನೆಗಳು ವಿಶ್ವದಾದ್ಯಂತ ಗಮನ ಸೆಳೆದಿದ್ದವು. ಇದರ ಚಿತ್ರಣ ಸ್ತಬ್ಧಚಿತ್ರದಲ್ಲಿ ಅಡಕಗೊಂಡಿದೆ. ಹೀಗಾಗಿ ಸ್ತಬ್ಧಚಿತ್ರವು ಯುವ ಪೀಳಿಗೆಗೆ ಅಮೂಲ್ಯ ಸಂದೇಶವನ್ನು ಸಾರಲಿದೆ’ ಎಂದು ಮೋದಿಗೆ ಬರೆದ ಪತ್ರದಲ್ಲಿ ಪಿಣರಾಯಿ ಉಲ್ಲೇಖಿಸಿದ್ದಾರೆ.

ಮಾಲಿವುಡ್ ನಟ ದುಲ್ಖರ್ ಸಲ್ಮಾನ್ ಅವರಿಗೆ ಕೊರೊನಾ ಪಾಸಿಟಿವ್ – Vishwanews24

Leave a Reply