ಗಣೇಶ ಚತುರ್ಥಿ ಹಿನ್ನೆಲೆ: ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳ ಹಬ್ಬ ಆಚರಣೆ-Vishwanews24
ಗಣೇಶ ಚತುರ್ಥಿ ಹಿನ್ನೆಲೆ: ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳ ಹಬ್ಬ ಆಚರಣೆ-Vishwanews24
ಮುಲ್ಕಿ: ಮುಲ್ಕಿಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಕೊರಳ ಹಬ್ಬ ಸರಳ ರೀತಿಯಲ್ಲಿ ಆಚರಿಸಲಾಯಿತು.
ಬೆಳಗ್ಗೆ ದೇವಳದ ಅರ್ಚಕರು ದೇವಳದ ಎದುರಿನ ಗದ್ದೆಯಲ್ಲಿ ಪೂಜೆ ಸಲ್ಲಿಸಿ ತೆನೆಯನ್ನು ಪಲ್ಲಕ್ಕಿಯಲ್ಲಿ ದೇವಳಕ್ಕೆ ತರಲಾಯಿತು. ಬಳಿಕ ಬೆಳಗ್ಗೆ ಪ್ರಾತಃಕಾಲದ 5:40ರ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ತೆನೆಯನ್ನು ಭಕ್ತರಿಗೆ ವಿತರಿಸಲಾಯಿತು.
ಗಣೇಶ ಚತುರ್ಥಿಯ ಹಬ್ಬದಂದು ಹಿಂದೂ ಸಂಪ್ರದಾಯದಂತೆ ಅನಾದಿಕಾಲದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳ ಹಬ್ಬ ಆಚರಿಸುತ್ತಿರುವುದು ವಾಡಿಕೆಯಾಗಿ ಬಂದಿದ್ದು, ಪ್ರಾತಃಕಾಲ ಭಕ್ತರು ದೇವಳಕ್ಕೆ ಆಗಮಿಸಿ ಹಣ್ಣುಕಾಯಿ ಅರ್ಪಿಸಿ ತೆನೆ ಪ್ರಸಾದರೂಪದಲ್ಲಿ ಪಡೆದುಕೊಳ್ಳುತ್ತಾರೆ.
