ಗಣೇಶ ಚತುರ್ಥಿಯಂದು ನಿತ್ಯಾನಂದನಿಂದ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪನೆ -Vishwanews24
ಗಣೇಶ ಚತುರ್ಥಿಯಂದು ನಿತ್ಯಾನಂದನಿಂದ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪನೆ -Vishwanews24
ನವದೆಹಲಿ: ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಸಮೀಪದಲ್ಲಿ ದ್ವೀಪದಲ್ಲಿ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಗಣೇಶ ಚತುರ್ಥಿಯಂದು ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪನೆ ಘೋಷಿಸಿದ್ದಾರೆ.
ತನ್ನದೇ ಕೈಲಾಸ ದೇಶವಾದ ರಿಸರ್ವ್ ಬ್ಯಾಂಕ್ ಆಫ್ ಕೈಲಾಸವನ್ನು ನಿತ್ಯಾನಂದ ತನ್ನ ಸಹಚರರೊಂದಿಗೆ ಬಿಡುಗಡೆ ಮಾಡಿದ್ದು, ಹಿಂದೂ ಧರ್ಮದ ಸುಧಾರಕ ನಾನಲ್ಲ. ಬದಲಾಗಿ ನಾನು ಪುನರುಜ್ಜೀವನಗೊಳಿಸುವವನಾಗಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಕರೆನ್ಸಿ ಬಿಡುಗಡೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗಣೇಶ ಚತುರ್ಥಿಯಂದು ಬಿಡುಗಡೆ ಮಾಡಿರುವ ಈ ಕರೆನ್ಸಿಯನ್ನು ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದಿದ್ದಾರೆ.
