ಗೀತಾಂಜಲಿ ಸುವರ್ಣ ವತಿಯಿಂದ ಕಟಪಾಡಿ ಜೆ.ಎನ್ ನಗರಕ್ಕೆ ಟ್ಯಾಂಕರ್ ನೀರು ಸರಬರಾಜಿಗೆ ಸಂಸದೆ ಶೋಭಾ ಚಾಲನೆ. Vishwanews24

Featured, ಉಡುಪಿ

ಗೀತಾಂಜಲಿ ಸುವರ್ಣ ವತಿಯಿಂದ ಕಟಪಾಡಿ ಜೆ.ಎನ್ ನಗರಕ್ಕೆ ಟ್ಯಾಂಕರ್ ನೀರು ಸರಬರಾಜಿಗೆ ಸಂಸದೆ ಶೋಭಾ ಚಾಲನೆ.

ಕಟಪಾಡಿ: ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ವತಿಯಿಂದ ಕಟಪಾಡಿ ಜೆ.ಎನ್ ನಗರ ಕಾಲೋನಿಯ ಜನತೆಗೆ ಟ್ಯಾಂಕರ್ ಮೂಲಕ‌ ಕುಡಿಯುವ ನೀರು ಸರಬರಾಜಿಗೆ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ‌ ನೀಡಿದರು‌ ಮತ್ತು ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಿದರು.


ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸದೆ” ಬೇಸಿಗೆ ಕಾಲದಲ್ಲಿ ನೀರಿನ‌ ಬರ ನೀಗಿಸಲು ಗೀತಾಂಜಲಿ ಸುವರ್ಣ ವೈಯಕ್ತಿಕ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ ಇದನ್ನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದರು”

ಗೀತಾಂಜಲಿ ಸುವರ್ಣ ಮಾತಾಡಿ ” ನನ್ನ ಕ್ಷೇತ್ರದ ಜನತೆಯ ಕಷ್ಟದಲ್ಲಿ ಭಾಗಿಯಾಗುವುದು ಧರ್ಮ‌ ಮತ್ತು ಕರ್ತವ್ಯ ಈ‌ ಹಿಂದಿನ ದಿನಗಳಲ್ಲಿ ‌ಒಂದು ಸುತ್ತಿನ‌ ಕಿಟ್ ವಿತರಣೆ ಮಾಡಿದ್ದು ಪ್ರಸ್ತುತ ನೀರಿನ ಸಮಸ್ಯೆ ಎಂದಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಈ‌ ಸಂಧರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗುರ್ಮೆ ಸುರೇಶ್ ಶೆಟ್ಟಿ,ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್,ವೀಣಾ ಶೆಟ್ಟಿ, ಪವಿತ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್
ವಿಶ್ವನ್ಯೂಸ್24: 9343846360