ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಉದ್ದೇಶ ನಮ್ಮ ಮುಂದಿಲ್ಲ : ರೈಲ್ವೇ ಪ್ರಕಟನೆ – vishwanews24
ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಉದ್ದೇಶ ನಮ್ಮ ಮುಂದಿಲ್ಲ : ರೈಲ್ವೇ ಪ್ರಕಟನೆ
ಮಂಗಳೂರು: ಮಂಗಳೂರು- ಬೆಂಗಳೂರು ನಡುವೆ ಘಾಟಿ ಮಾರ್ಗದಲ್ಲಿ ಇತ್ತೀಚೆಗಷ್ಟೇ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಭಾಗದ ರೈಲ್ವೇ ಸಂಚಾರದ ಸುಧಾರಣೆಗೆ ಪೂರಕವಾಗಿದೆ. ಆದರೆ ಬೆಂಗಳೂರು-ಗೋವಾ ಮಾರ್ಗದಲ್ಲಿ ವಂದೇಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಸಚಿವರು ಹೇಳಿಕೆ ನೀಡಿದ್ದಾರೆ, ಇದರ ಬಗ್ಗೆ ನೈಋತ್ಯ ರೈಲ್ವೆಗೆ ರೈಲ್ವೇ ಮಂಡಳಿಯಿಂದ ಅಧಿಕೃತ ಸೂಚನೆ ಲಭ್ಯವಾಗಿಲ್ಲ ಎಂದು ನೈಋತ್ಯ ರೈಲ್ವೇ ಪ್ರಕಟನೆ ತಿಳಿಸಿದೆ.
ಹಾಗಾಗಿ ಈ ವಂದೇಭಾರತ್ ರೈಲಿಗಾಗಿ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಉದ್ದೇಶ ಅಥವಾ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:
ಕ್ಯಾಂಡಿ ಪ್ಯಾಕೆಟ್ ನಲ್ಲಿ ಡ್ರಗ್ಸ್ ಸಾಗಣೆ : ಬೆಂಗಳೂರು ಏರ್ಪೋರ್ಟಲ್ಲಿ ಇಬ್ಬರ ಬಂಧನ – vishwanews24
