ಗೋ ಕಳ್ಳರನ್ನು ಹಿಡಿಯಲು ಪೊಲೀಸರಿಗೆ ಭಯವಿದೆ : ಸಚಿವ ಕೆ.ಎಸ್ ಈಶ್ವರಪ್ಪ

ಉಡುಪಿ

ಗೋ ಕಳ್ಳರನ್ನು ಹಿಡಿಯಲು ಪೊಲೀಸರಿಗೆ ಭಯವಿದೆ :ಸಚಿವ ಕೆ.ಎಸ್ ಈಶ್ವರಪ್ಪ

ಮಣಿಪಾಲ: ಶಿವಮೊಗ್ಗದಲ್ಲಿ ಗೋರಕ್ಷಕರ ಮೇಲೆ ವಾಹನ ಹತ್ತಿಸಿ ಕೊಲೆ ಯತ್ನದ ವಿಚಾರವಾಗಿ ಸಚಿವ ಕೆಎಸ್ ಈಶ್ವರಪ್ಪ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಗೋರಕ್ಷಕರ ಆರೋಗ್ಯ ವಿಚಾರಿಸಿದರು.
ತದನಂತರ ಮಾಧ್ಯಮದವರ ಜೊತೆ ಮಾತನಾಡಿ ಯಾವುದೇ ಗೋರಕ್ಷಕರಿಗೆ ಯಾವುದೇ ರೀತಿಯ ಪ್ರಾಣಾಪಾಯವಿಲ್ಲ ಸಂಘಟನೆ ಮತ್ತು ಸರ್ಕಾರ ಗಾಯಾಳುಗಳಿಗೆ ಸಹಕಾರ ನೀಡುತ್ತದೆ ಕುಟುಂಬದಿಂದ ಗಾಯಾಳುಗಳಿಗೆ ಒಂದು ಪೈಸೆಯೂ ಖರ್ಚಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದರು. ಗೋರಕ್ಷಣೆ ವಿಚಾರದಲ್ಲಿ ಕಾನೂನು ಸಮರ್ಥವಾಗಿದೆ ಪೊಲೀಸ್ ಇಲಾಖೆ ಇನ್ನಷ್ಟು ಬಿಗಿಯಾಗಬೇಕು ಗೋ ಹಂತಕರನ್ನು ಹಿಡಿಯಲು ಪೊಲೀಸರಿಗೂ ಭಯವಿದೆ ತಮ್ಮ ಕುಟುಂಬದ ಸದಸ್ಯರಿಗೆ ಏನಾದರೂ ಸಮಸ್ಯೆಯಾಗುತ್ತೆಂಬ ಜೀವಭಯದಿಂದ ಕೆಲಸ ಮಾಡುತ್ತಿದ್ದಾರೆ.ಇದರಿಂದಾಗಿ ಪೊಲೀಸ್ ಇಲಾಖೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದರು .
ಸಚಿವನಾಗಿ ನನಗೆ ಈಗಲೂ ಗೋಕಳ್ಳರ ವಿಚಾರದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ಇದೆ ಹೆಂಡತಿ ಮಕ್ಕಳಿಗೆ ಏನಾದರೂ ಮಾಡಿದರೆ ಎಂಬ ಭಯವಿರುವ ಕಾರಣ ಸ್ವಲ್ಪ ಹಿಂಜರಿಯುತ್ತಿದ್ದಾರೆ .
“ಬಿಜೆಪಿ ಸರ್ಕಾರ ಬಂದ ನಂತರ ಗೋಹತ್ಯೆ ಸಂಪೂರ್ಣವಾಗಿ ನಿಂತಿಲ್ಲ ಇದನ್ನೆಲ್ಲಾ ನೋಡುವಾಗ ನನಗೂ ಹೊಟ್ಟೆ ಉರಿಯುತ್ತದೆ ಸಂಪೂರ್ಣವಾಗಿ ಗೋಹತ್ಯ ನಿಲ್ಲಿಸಲು ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ, ಬಲೆ ಹಾಕುತ್ತೇವೆ ಮತ್ತು ಬಲಿತೆಗೆದುಕೊಳ್ಳುತ್ತೆವೆ “ಎಂದು ಈಶ್ವರಪ್ಪ ಹೇಳಿದರು.