ಗೋ-ಕಾರ್ಟ್‌ನಲ್ಲಿ ಕೂದಲು ಸಿಕ್ಕಿ ಭಾರತೀಯ ಮೂಲದ 15ರ ಹರೆಯದ ಹುಡುಗಿ ಗಂಭೀರ ಗಾಯ – Vishwanews24

Featured, ಉಡುಪಿ

ಗೋ-ಕಾರ್ಟ್‌ನಲ್ಲಿ ಕೂದಲು ಸಿಕ್ಕಿ ಭಾರತೀಯ ಮೂಲದ 15ರ ಹರೆಯದ ಹುಡುಗಿ ಗಂಭೀರ ಗಾಯ

ಜೋಹಾನ್ಸ್‌ಬರ್ಗ್: ಭಾರತೀಯ ಮೂಲದ 15ರ ಹರೆಯದ ಹುಡುಗಿಯೊಬ್ಬಳು ಮನರಂಜನಾ ಕೇಂದ್ರದಲ್ಲಿ ಗೋ-ಕಾರ್ಟ್‌ನಲ್ಲಿ ಕೂದಲು ಸಿಕ್ಕಿಹಾಕಿಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಕ್ರಿಸ್ಟನ್ ಗೋವೆಂದರ್ ಅವರು ಡರ್ಬನ್ ನ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾರೆ. ಅವರ ಬೆನ್ನುಹುರಿಗೆ ಹಾನಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರಿಸ್ಟನ್ ಗೋವೆಂದರ್ ಕಳೆದ ಬುಧವಾರ ಗಾಯಗೊಂಡಿದ್ದಾರೆ. ಆಕೆಯ ಸೊಂಟದಿಂದ ಯಾವುದೇ ಚಲನೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು ಎಂದು ಆಕೆಯ ತಂದೆ ವೆರ್ನಾನ್ ಗೋವೆಂದರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೈಪ್ ಲೈನ್ ಗಾಗಿ ಎಲ್ಲೆಂದರಲ್ಲಿ ರಸ್ತೆ ಅಗೆದು ಜನರಿಗೆ ತೊಂದರೆ ಉಂಟುಮಾಡಿದರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ : ಗೇಲ್‌ ಕಂಪೆನಿ ಅಧಿಕಾರಿಗಳಿಗೆ ಭರತ್‌ ಶೆಟ್ಟಿ ಎಚ್ಚರಿಕೆ – Vishwanews24

ತನ್ನ ಮಗಳು ಕೇಂದ್ರದಲ್ಲಿ ಹೆಲ್ಮೆಟ್ ಧರಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ್ದಾಳೆ. ಅಲ್ಲದೆ ಅವಳ ಉದ್ದನೆಯ ಕೂದಲನ್ನು ಪೋನಿಟೇಲ್‌ ನಲ್ಲಿ ಕಟ್ಟಲಾಗಿತ್ತು ಎಂದು ಗೋವೆಂದರ್ ಹೇಳಿದರು.

ಗೋ ಕಾರ್ಟ್‌ನಲ್ಲಿನ ಉಪಕರಣಗಳು ದೋಷಯುಕ್ತವಾಗಿವೆ, ತಕ್ಷಣದ ನೆರವು ನೀಡಲು ವಿಫಲವಾಗಿದೆ ಎಂಬ ಗೋವೆಂದರ್ ಅವರ ಆರೋಪಗಳ ನಡುವೆ, ಘಟನೆ ನಡೆದ ಡರ್ಬನ್‌ ನ ಜನಪ್ರಿಯ ಗೇಟ್‌ ವೇ ಮಾಲ್‌ ನ ಮ್ಯಾನೇಜ್ ಮೆಂಟ್ ಯಾವುದೇ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಎಸ್‌.ಎಂ.ಕೃಷ್ಣ ಅವರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ : ಕಾಂಗ್ರೆಸ್‌ – Vishwanews24

Leave a Reply