ಗೌರವಾನ್ವಿತ ರಾಜ್ಯಸಭಾ ಸದಸ್ಯರೂ ಆಗಿರುವ ಪಿ. ಚಿದಂಬರಂ ಅನೇಕ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ : ಪ್ರಿಯಾಂಕಾ ಗಾಂಧಿ -Vishwanews24
ನವದೆಹಲಿ: ಕಾಂಗ್ರೆಸ್ ನಾಯಕರು ಪಿ.ಚಿದಂಬರಂ ಅವರ ಬೆನ್ನಿಗೆ ನಿಂತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ಚಿದಂಬರಂ ವಿರುದ್ಧ ಕೈಗೊಂಡಿರುವ ಕ್ರಮಕ್ಕೆ ಕಿಡಿಕಾರಿದ್ದಾರೆ.
‘ಗೌರವಾನ್ವಿತ ರಾಜ್ಯಸಭಾ ಸದಸ್ಯರೂ ಆಗಿರುವ ಪಿ. ಚಿದಂಬರಂ ಅನೇಕ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಚಿದಂಬರಂ ಅವರು ಈಗ ಸರ್ಕಾರದ ವೈಫಲ್ಯದ ಕುರಿತು ಸತತ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಬಳಸಿಕೊಂಡು ಅವರನ್ನು ಬೇಟೆಯಾಡುತ್ತಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ’ ಎಂದು ಗುಡುಗಿದ್ದಾರೆ.
ಇನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ಕೇಂದ್ರ ಮೋದಿ ಸರ್ಕಾರ ಪೊಲೀಸ್ ವ್ಯವಸ್ಥೆಯ ಮೂಲಕ ರಾಷ್ಟ್ರವನ್ನು ನಡೆಸುತ್ತಿರುವ ಕೆಟ್ಟ ಆಡಳಿತಕ್ಕೆ ಭಾರತ ಸಾಕ್ಷಿಯಾಗಿದೆ.
ಇನ್ನೂ, 7 ತಿಂಗಳ ಕಾಲ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಧೀಶರು ತಾನು ನಿವೃತ್ತಿ ಹೊಂದಲು ಕೇವಲ 72 ಗಂಟೆಗಳ ಮೊದಲು ಇಂತಹ ತೀರ್ಪನ್ನು ನೀಡುತ್ತಾರೆ ಮತ್ತು ಸಿಬಿಐ, ಇಡಿ ಅಧಿಕಾರಿಗಳು ಮಾಜಿ ಕೇಂದ್ರ ಹಣಕಾಸು ಸಚಿವರ ಮನೆಗೆ ದಾಳಿ ಮಾಡುತ್ತಾರೆ ಎಂದರೆ ನಾವು ಎಂತಹ ವ್ಯವಸ್ಥೆಯಲ್ಲಿ ಇದ್ದೇವೆ?’ ಎಂದು ಪ್ರಶ್ನಿಸಿದ್ದಾರೆ..
