ಗ್ರಾ. ಪಂ. ಚುನಾವಣೆಯಲ್ಲಿಬಿಜೆಪಿ ಮಹತ್ತರವಾದ ಗೆಲುವು ಸಾಧಿಸಲಿದೆ : ಕೋಟ ಶ್ರೀನಿವಾಸ ಪೂಜಾರಿ -Vishwanews24

Featured, ಉಡುಪಿ

ಗ್ರಾ. ಪಂ. ಚುನಾವಣೆಯಲ್ಲಿಬಿಜೆಪಿ ಮಹತ್ತರವಾದ ಗೆಲುವು ಸಾಧಿಸಲಿದೆ : ಕೋಟ ಶ್ರೀನಿವಾಸ ಪೂಜಾರಿ -Vishwanews24

ಕುಂದಾಪುರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗ್ರಾ.ಪಂ ಚುನಾವಣೆ ಹಿನ್ನೆಲೆ ಬೈಂದೂರಿನಲ್ಲಿ ಸೋಮವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇದು ಗ್ರಾಮ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆ ಯಾಗಿದ್ದುಪಂಚಾಯತ್ ರಾಜ್ ವ್ಯವಸ್ಥೆ ಆಳಿಸಿಕೊಳ್ಳುವವರ ಆಡಳಿತವಾಗಿದೆ. ಆಳಿಸಿಕೊಳ್ಳುವವರ ಆಡಳಿತದಲ್ಲಿ ಬಿಜೆಪಿ ಮಹತ್ತರವಾದ ಗೆಲುವು ಸಾಧಿಸಲಿದೆ ಎಂದರು.

ರಾಜ್ಯದಲ್ಲಿ 6020 ಗ್ರಾ.ಪಂ ನಲ್ಲಿ ಚುನಾವಣೆ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ 154 ಗ್ರಾ.ಪಂ ನಲ್ಲಿ ಚುನಾವಣೆ ನಡೆಯಲಿದೆ. ಬೈಂದೂರು ವಿಧಾನಸಭಾ ವ್ಯಾಪ್ತಿಯ 39 ಪಂಚಾಯತ್ ನಲ್ಲೂ ಬಿಜೆಪಿ ಮೇಲುಗೈ ಸಾಧಿಸುವ ವಾತಾವರಣವಿದೆ. 39 ಪಂಚಾಯತ್ ನಲ್ಲಿ ನೂರಕ್ಕೆ ನೂರು ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯುತ್ತಾರೆ. ಖಂಡಿತವಾಗಿಯೂ ಗ್ರಾಮ ಮಟ್ಟದಲ್ಲಿ ಪಾರದರ್ಶಕ ಆಡಳಿತವನ್ನು ಕೊಡುತ್ತೇವೆ ಆದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಕೈ ಹಿಡಿಯಲು ಮತದಾರರಿಗೆ ಸಚಿವ ಕೋಟ ಮನವಿ ಮಾಡಿದರು.

ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ವಿಲೀನ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಇದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು. ಈ ಬಗ್ಗೆ ಹಿರಿಯ ಮುಖಂಡರು ಈ ಬಗ್ಗೆ ತೀರ್ಮಾನಿಸುತ್ತಾರೆ, ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ಗಮನಿಸಿದ್ದೇನೆ, ಈ ವಿಚಾರವಾಗಿ ನನಗೇನು ಗೊತ್ತಿಲ್ಲ ಎಂದರು.