ಚನ್ನಗಿರಿ ಪ್ರಕರಣ : ಅದು ಲಾಕಪ್ ಡೆತ್ ಅಲ್ಲ – ಅವನಿಗೆ ಮೂರ್ಛೆ ರೋಗ ಇತ್ತು : ಸಿಎಂ ಸ್ಪಷ್ಟನೆ – vishwanews24
ಚನ್ನಗಿರಿ ಪ್ರಕರಣ : ಅದು ಲಾಕಪ್ ಡೆತ್ ಅಲ್ಲ – ಅವನಿಗೆ ಮೂರ್ಛೆ ರೋಗ ಇತ್ತು ,ಅದರಿಂದ ಮೃತಪಟ್ಟಿದ್ದಾನೆ : ಸಿಎಂ ಸ್ಪಷ್ಟನೆ
ಮೈಸೂರು: ಚನ್ನಗಿರಿ ಲಾಕಪ್ ಡೆತ್ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅದು ಲಾಕಪ್ ಡೆತ್ ಅಲ್ಲ. ಅವನಿಗೆ ಮೂರ್ಛೆ ರೋಗ ಇತ್ತು. ಆ ರೋಗದಿಂದ ಆತ ಮೃತಪಟ್ಟಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಎಫ್ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಆದೇಶ ಮಾಡಿದ್ದೇನೆ. ಆದರೆ ಇದು ಲಾಕಪ್ ಡೆತ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ಪುತ್ತೂರು : ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು – vishwanews24
