ಚಲಿಸುತ್ತಿದ್ದ ರೈಲಿನಲ್ಲೇ ಹುಚ್ಚು ಸಾಹಸ : ಕಂಬಕ್ಕೆ ತಲೆ ಡಿಕ್ಕಿ ಹೊಡೆದು ರೈಲಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ – Vishwanews24

Featured, ರಾಷ್ಟ್ರ ನ್ಯೂಸ್

ಚಲಿಸುತ್ತಿದ್ದ ರೈಲಿನಲ್ಲೇ ಹುಚ್ಚು ಸಾಹಸ : ಕಂಬಕ್ಕೆ ತಲೆ ಡಿಕ್ಕಿ ಹೊಡೆದು ರೈಲಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ

ಲೂಧಿಯಾನ: ಯುವಕನೊಬ್ಬ ಚಲಿಸುತ್ತಿದ್ದ ರೈಲಿನಲ್ಲೇ ಹುಚ್ಚು ಸಾಹಸ ಮಾಡುವುದಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಘಟನೆ ಖನ್ನಾದ ಚಾವಾ ರೈಲು ನಿಲ್ದಾಣದ ಬಳಿ ನಡೆದಿದೆ.

ಈತ ಚಾವಾ ರೈಲು ನಿಲ್ದಾಣದ ಸನಿಹ ಸಮ್ರಾಲಾ ಬಳಿ ಮಾಲ್ವಾ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತುಕೊಂಡು ನೇತಾಡುತ್ತಾ ಸಂಚರಿಸಿದ್ದಾನೆ. ಈ ವೇಳೆ ಕಂಬಕ್ಕೆ ತಲೆ ಢಿಕ್ಕಿ ಹೊಡೆದು ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ 30ರ ಆಸುಪಾಸಿನ ಯುವಕನಾಗಿದ್ದು, ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್..

ಇನ್ನು ಈತ ಚಲಿಸುತ್ತಿದ್ದ ರೈಲಿನಲ್ಲೇ ಹುಚ್ಚು ಸಾಹಸ ಮಾಡುತ್ತಿದ್ದುದನ್ನು ಇತರರು ಸೆರೆ ಹಿಡಿದಿದ್ದಾರೆ. ವೀಡಿಯೋ ಮಾಡುತ್ತಿದ್ದವರು ಆತನ ಪರಿಚಿತರೇ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Leave a Reply