ಚಾಮುಂಡೇಶ್ವರಿ ಮೇಲಾಣೆ ನಾನು ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್ -Vishwanews24
ಬೆಳಗಾವಿ : ಚಾಮುಂಡೇಶ್ವರಿ ಮೇಲಾಣೆ ನಾನು ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ. ಒಂದು ವೇಳೆ ಅಕ್ರಮ ಆಸ್ತಿ ಸಂಪಾದಿಸಿದ್ದರೆ ಅದನ್ನು ಸರಕಾರಕ್ಕೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅವರು ಇಂದು ನಗರದಲ್ಲ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಚಾಮುಂಡೇಶ್ವರಿ ಮೇಲಾಣೆ ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ, ಸೋಲಾರ್ ಪವರ್ ಪ್ಲಾಂಟ್ ನನ್ನ ಹೆಸರಿನಲ್ಲಿ ಇಲ್ಲ. ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳು ಇಲ್ಲ ಯಾವುದೇ ಅವ್ಯವಹಾರ ಇಲ್ಲ ಅಂತ ಹೇಳಿದರು.
ಇನ್ನು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ನಡೆಯಲಿದೆ. ನಾನು ಈ ಹಂತಕ್ಕೆ ಬೆಳಯುವಲ್ಲಿ ಸಾಕಷ್ಟು ನೋವು ಅನುಭವಿಸಿರುವೆ, ಯಾವುದೇ ಹಗರಣಗಳು ಇಲ್ಲ. ಎಲ್ಲವೂ ಆರೋಪಗಳು ಇದ್ದಾವೆ. ಸಾಬೀತು ಆಗಲಿ ಅಂಥ ಹೇಳಿದರು.
