ಚಾಲಕನ ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಕಾರು ಡಿಕ್ಕಿ ; ಸ್ಥಳದಲ್ಲೇ ಇಬ್ಬರ ದುರ್ಮರಣ – vishwanews24
ಚಾಲಕನ ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಕಾರು ಡಿಕ್ಕಿ ; ಸ್ಥಳದಲ್ಲಿಯೇ ಇಬ್ಬರ ದುರ್ಮರಣ
ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಸ್ವಿಪ್ಟ್ ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ಬಳಿ ನಡೆದಿದೆ.
ಘಟನೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ನೀಲಪ್ಪ ಮೂಲಿಮನಿ (23), ಸುದೀಪ್ ಕೋಟಿ (18) ಎಂದು ಗುರುತಿಸಲಾಗಿದೆ. ಇವರಿಬ್ಬರು ಸವಣೂರು ತಾಲೂಕು ಬೇವಿನಹಳ್ಳಿ ಗ್ರಾಮದ ನಿವಾಸಿಗಳು.
ನಗರಾಭಿವೃದ್ಧಿ ಇಲಾಖೆ ಎಡವಟ್ಟು : 6 ತಿಂಗಳ ಹಿಂದೆ ಮೃತಪಟ್ಟ ಇಂಜಿನಿಯರ್ ಗೆ ವರ್ಗಾವಣೆ ಆದೇಶ – vishwanews24
ಏಳು ಮಂದಿ ಯುವಕರು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ನಂದಗಡಕ್ಕೆ ಹೊರಟಿದ್ದರು. ವಾಹನ ಓವರ್ ಟೇಕ್ ಮಾಡಲು ಹೋದಾಗ ಅಪಘಾಥ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬೇವಿನಮರಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
