ಚಿಕ್ಕಮಗಳೂರು : 2012 ರಲ್ಲಿ ತಯಾರಾದ ಗ್ಲುಕೋಸ್ , 2021ರ ಲೇಬಲ್ ಅಂಟಿಸಿ ಮತ್ತೆ ಮಾರಾಟ -Vishwanews24
ಚಿಕ್ಕಮಗಳೂರು : 2012 ರಲ್ಲಿ ತಯಾರಾದ ಗ್ಲುಕೋಸ್ , 2021ರ ಲೇಬಲ್ ಅಂಟಿಸಿ ಮತ್ತೆ ಮಾರಾಟ -Vishwanews24
ಚಿಕ್ಕಮಗಳೂರು, : ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆ ಆವರಣದ ಜೆನರಿಕ್ ಮೆಡಿಕಲ್ ಕೇಂದ್ರದಲ್ಲಿ ತನಗೆ ಒಂಭತ್ತು ವರ್ಷ ಹಳೆಯ ಗ್ಲುಕೋಸ್ ಹುಡಿಯ ಪ್ಯಾಕೇಟ್ ಅನ್ನು ಮಾರಾಟ ಮಾಡಲಾಗಿದೆ ಎಂದು ಗ್ರಾಹಕರೊಬ್ಬರು ಆರೋಪಿಸಿದ್ದಾರೆ.
ಗುರು ಎಂಬವರು ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದ ಜೆನರಿಕ್ ಮೆಡಿಕಲ್ ಕೇಂದ್ರದಿಂದ ಸೋಮವಾರ ಗ್ಲುಕೋಸ್ ಖರೀದಿಸಿದ್ದರು. ಬಳಿಕ ಅದನ್ನು ಪರಿಶೀಲಿಸಿದಾಗ 2012ರ ಎಪ್ರಿಲ್ ನಲ್ಲಿ ತಯಾರಾದ ಗ್ಲುಕೋಸ್ ಅನ್ನು 2021ರ ಎಪ್ರಿಲ್ ನಲ್ಲಿ ತಯಾರಾಗಿರುವುದು ಎಂದು ಮತ್ತೆ ಮಾರಾಟ ಮಾಡಿರುವುದು ಬೆಳಕಿಗೆ ಬಂತು ಎಂದು ಗುರು ತಿಳಿಸಿದ್ದಾರೆ.
ಮಂಗಳೂರು: ಭಾರತದಿಂದ ದುಬೈಗೆ ತೆರಳುವ ಪ್ರಯಾಣಿಕರ ಗಮನಕ್ಕೆ ..! Vishwanews24
ಗ್ಲುಕೋಸ್ ಪ್ಯಾಕೇಟ್ ನಲ್ಲಿ ತಯಾರಿಕಾ ದಿನಾಂಕ 2012ರ ಎಪ್ರಿಲ್ ಎಂದು ನಮೂದಿಸಿರುವುದರ ಮೇಲೆ ತಯಾರಿ ದಿನಾಂಕ 2021ರ ಎಪ್ರಿಲ್ ಎಂದು ಬರೆದಿರುವ ಲೇಬಲ್ ಅಂಟಿಸಲಾಗಿದೆ ಎಂದು ಗುರು ಆರೋಪಿಸಿದ್ದಾರೆ.
ಗ್ಲುಕೋಸ್ ತಯಾರಿ ದಿನಾಂಕದ ಅಸಲಿಯತ್ತು ಪರಿಶೀಲಿಸಲೆಂದು ಮತ್ತೊಂದು ಪ್ಯಾಕೇಟ್ ಖರೀದಿಸಿದಾಗ ಅದರಲ್ಲೂ ಇದೇರೀತಿ ತಯಾರಾದ ದಿನಾಂಕವನ್ನು ಬದಲಿಸಿ ವಂಚಿಸಿರುವುದು ಪತ್ತೆಯಾಯಿತು ಎಂದು ಗುರು ತಿಳಿಸಿದ್ದಾರೆ.
23 ರೂ.ನ ಗ್ಲಕೋಸ್ ನ ಆಯಸ್ಸು ಕೇವಲ 24 ತಿಂಗಳು ಮಾತ್ರ ಇದ್ದರೂ 9 ವರ್ಷ ಹಳೆಯ ಉತ್ಪನ್ನವನ್ನು ರಿಯಾಯಿತಿ ದರ ಎಂದು 13 ರೂ.ಗೆ ಈ ರೀತಿ ಮಾರಾಟ ಮಾಡಲಾಗುತ್ತಿದೆ ಎಂದು ಗುರು ಆರೋಪಿಸಿದ್ದಾರೆ.
ಮೂರು ತಿಂಗಳ ಅವಧಿಗೆ ಉಚಿತ ಪಡಿತರ ಘೋಷಿಸಿದ ಮಧ್ಯಪ್ರದೇಶ ಸರ್ಕಾರ -Vishwanews24

