ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ – ರಸ್ತೆ ಮಧ್ಯೆ ಡ್ಯಾನ್ಸ್ : ಸೂಕ್ತ ಕ್ರಮಕ್ಕೆ ಮನವಿ – Vishwanews24

Featured, ರಾಜ್ಯ ನ್ಯೂಸ್

ಚಾರ್ಮಾಡಿ ಘಾಟಿಯ ಜಾರುವ ಬಂಡೆಗಳ ಮೇಲೆ ಹತ್ತಿ ಪ್ರವಾಸಿಗರ ಹುಚ್ಚಾಟ ..

ರಸ್ತೆ ಮಧ್ಯೆ ಟ್ರಾಫಿಕ್ ಜಾಮ್  ಮಾಡಿ ಡ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ..

ಜಾರು ಬಂಡೆಗಳ ಮೇಲೆ ಹತ್ತಿ ಫೋಟೋಗೆ ಪೋಸ್..

ರಸ್ತೆ ಮಧ್ಯೆ ಯುವಕ-ಯುವತಿಯ ಮೋಜು-ಮಸ್ತಿಗೆ ಬೇಸತ್ತು  ಹೋದ ವಾಹನ ಸವಾರರು..

ಚಾರ್ಮಾಡಿ ಘಾಟ್ ಪ್ರವಾಸಿಗರಿಗೆ ಸೂಕ್ತ ಕ್ರಮಕ್ಕೆ ಮನವಿ..

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರು ಮೋಜು-ಮಸ್ತಿ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿಕೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಆಡಿದ್ದೇ ಆಟ, ಹೇಳೋರಿಲ್ಲ-ಕೇಳೋರಿಲ್ಲ ಅನ್ನೋವಂತಾಗಿದೆ.  ಜಾರುವ ಬಂಡೆಗಳ ಮೇಲೆ ಹತ್ತಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ.

ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡ್ಕೊಂಡು ಟೂರಿಸ್ಟ್ ಗಳು ಡ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಕೆಲ ಪ್ರವಾಸಿಗರಿಗೆ ಟ್ರಾಫಿಕ್ ಜಾಮ್ ಮಾಡ್ಕೊಂಡು ರಸ್ತೆ ಮಧ್ಯೆ ಟಿಕ್‍ಟಾಕ್ ಮಾಡೋ ಶೋಕಿಯಾದ್ರೆ, ಇನ್ನೂ ಕೆಲವರು ಜಾರು ಬಂಡೆಗಳ ಮೇಲೆ ಹತ್ತಿ ಫೋಟೋಗೆ ಪೋಸ್ ಕೊಡುತ್ತಿದ್ದಾರೆ.

ಸ್ವಲ್ಪ ಯಾಮಾರಿ ಜಾರಿ ಬಿದ್ದರೂ ಕೈ-ಕಾಲುಗಳಿಗೆ ಗಾಯಗಳಾಗುವ ಸಾಧ್ಯತೆಗಳಿವೆ. ಈ ಹಿಂದೆ ಬಿದ್ದು ಕೈ-ಕಾಲು ಮುರ್ಕೊಂಡು, ತಲೆ ಹೊಡೆದುಕೊಂಡಿರುವ ಹಾಗೂ ಪ್ರಾಣವೂ ಹೋದ ಉದಾಹರಣೆಗಳು ಸಾಕಷ್ಟಿವೆ. ರಸ್ತೆ ಮಧ್ಯೆ ಯುವಕ-ಯುವತಿಯ ಮೋಜು-ಮಸ್ತಿಗೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.

ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ- ಸೂಕ್ತ ಕ್ರಮಕ್ಕೆ ಮನವಿ –  Public TV

ಟ್ರಾಫಿಕ್‌ ಪೊಲೀಸರು ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ತಡೆದು ನಿಲ್ಲಿಸುವಂತಿಲ್ಲ ; ಡ್ರಿಂಕ್‌ & ಡ್ರೈವ್ ‘ ಮಾಡುವ ವಾಹನಗಳಿಗೆ ಮಾತ್ರ ಫೈನ್ : ಡಿಜಿ ಪ್ರವೀಣ್‌ ಸೂದ್‌ ಸೂಚನೆ – Vishwanews24

Leave a Reply