ಚಿಕ್ಕಮಗಳೂರು : ಪೊಲೀಸ್ ಠಾಣೆಯಲ್ಲಿ ಲಾಕಪ್  ಚಿಲಕ ತೆಗೆದು ಪರಾರಿಯಾದ ಪೋಕ್ಸೋ ಆರೋಪಿ  -VIshwanews24

Featured, ರಾಜ್ಯ ನ್ಯೂಸ್

ಚಿಕ್ಕಮಗಳೂರು : ಪೊಲೀಸ್ ಠಾಣೆಯಲ್ಲಿ ಲಾಕಪ್  ಚಿಲಕ ತೆಗೆದು ಪರಾರಿಯಾದ ಪೋಕ್ಸೋ ಆರೋಪಿ  -VIshwanews24

ಚಿಕ್ಕಮಗಳೂರು: ಬಂಧನಕ್ಕೊಳಗಾಗಿದ್ದ ಪೋಕ್ಸೋ ಆರೋಪಿಯೊಬ್ಬ ಪೊಲೀಸ್ ಠಾಣೆಯ ಲಾಕಪ್ ನ ಚಿಲಕ ತೆಗೆದು ಪರಾರಿಯಾಗಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ನಿಜಾಮ್ (26) ಪರಾರಿಯಾಗಿರುವ ಆರೋಪಿ.

ಆರೋಪಿ ನಿಜಾಮ್ ಮೇಲೆ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನದ ಆರೋಪವಿದೆ. ಹೀಗಾಗಿ ಈತನನ್ನು ಪೊಲೀಸರು ಬಂಧಿಸಿ ಠಾಣೆಯ ಸೆಲ್ ನಲ್ಲಿರಿಸಿದ್ದರು. ಆದರೆ ಠಾಣೆಯಲ್ಲಿ ಸಿಬ್ಬಂದಿಗಳು ಇಲ್ಲದ ಸಮಯ ನೋಡಿ ಆರೋಪಿ ನಿಜಾಮ್ ಲಾಕಪ್ ನಿಂದ ಪರಾರಿಯಾಗಿದ್ದಾನೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಠಾಣೆಯಿಂದಲೇ ಎಸ್ಕೇಪ್ ಆಗಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು : 7 ಮಕ್ಕಳ ನಾಪತ್ತೆ ಪ್ರಕರಣ : ಮೂವರು ಮಕ್ಕಳು ಪತ್ತೆ – Vishwanews24