ಚಿಕ್ಕಮಗಳೂರು: ಮೊದಲ ಬಾರಿಗೆ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹುಣ್ಣಿಮೆ ಪೂಜೆ – vishwanews24

Featured, ರಾಜ್ಯ ನ್ಯೂಸ್

ಚಿಕ್ಕಮಗಳೂರು: ಮೊದಲ ಬಾರಿಗೆ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹುಣ್ಣಿಮೆ ಪೂಜೆ

ಚಿಕ್ಕಮಗಳೂರು, : ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಹುಣ್ಣುಮೆ ಪೂಜೆ ನಡೆಸುತ್ತಿದ್ದಾರೆ. ಹುಣ್ಣಿಮೆ ಪೂಜೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇನ್ನು ಹುಣ್ಣಿಮೆ ಪೂಜೆಯಂದು ದತ್ತ ಪಾದುಕೆ ದರ್ಶನ, ಪೂಜೆ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಪ್ರತಿ ಹುಣ್ಣುಮೆ ದಿನ ಭಜರಂಗದಳ, VHP ಕಾರ್ಯಕರ್ತರು ದತ್ತ ಪಾದುಕೆಗೆ ಪೂಜೆ ಸಲ್ಲಿಸುತ್ತಿದ್ದರು. ಈಗ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಹುಣ್ಣಿಮೆ ಪೂಜೆ ನೆರವೇರಿಸಲಿದ್ದಾರೆ. ಬೈಕ್ ಜಾಥಾದ ಮೂಲಕ ಕಾರ್ಯಕರ್ತರು, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಲಿದ್ದಾರೆ. ಡಿಸೆಂಬರ್ 17 ರಿಂದ ದತ್ತಜಯಂತಿ ಆರಂಭವಾಗಲಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ – vishwanews24

ಸಂಪೂರ್ಣ ಹಿಂದು ಪೀಠಕ್ಕಾಗಿ ಆಗ್ರಹಿಸಿ ದತ್ತಜಯಂತಿ ನಡೆಯುತ್ತೆ. ಹಿಂದೂ ಪೀಠಕ್ಕಾಗಿ ಹೋರಾಟದ ಜೊತೆಗೆ ರಾಜಕೀಯವಾಗಿ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಭಾರಿ ಚರ್ಚೆಯಲ್ಲಿರುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲುವಿಗೆ ದತ್ತಪೀಠ ಹೋರಾಟ ಪ್ರಮುಖ ಕಾರಣವಾಗಿತ್ತು. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನು ದಕ್ಷಿಣ ಭಾರತದ ಅಯೋಧ್ಯೆ ಎಂದೇ ಕರೆಯಲಾಗುತ್ತೆ.

Leave a Reply