ಚಿಕ್ಕಮಗಳೂರು : ಹಲಾಲ್ ಬ್ಯಾನ್ ಅಭಿಯಾನ ; ಎಲ್ಲರೂ ಒಗ್ಗಟ್ಟಾಗಿ ಹಿಂದೂಗಳ ಬಳಿಯೇ ಮಾಂಸ ಸ್ವೀಕರಿಸೋಣ – Vishwanews24
ಚಿಕ್ಕಮಗಳೂರು : ಹಲಾಲ್ ಬ್ಯಾನ್ ಅಭಿಯಾನ ; ಎಲ್ಲರೂ ಒಗ್ಗಟ್ಟಾಗಿ ಹಿಂದೂಗಳ ಬಳಿಯೇ ಮಾಂಸ ಸ್ವೀಕರಿಸೋಣ – Vishwanews24
ಚಿಕ್ಕಮಗಳೂರು: ಜಾತ್ರೆ, ರಥೋತ್ಸವಗಳಲ್ಲಿ ಮುಸ್ಲಿಮರ ಅಂಗಡಿಗಳ ಬ್ಯಾನ್ ವಿಚಾರದ ಚರ್ಚೆ ಜೋರಾದ ಬೆನ್ನಲ್ಲೇ ಈಗ ಹಲಾಲ್ ಬ್ಯಾನ್ ಅಭಿಯಾನ ಆರಂಭವಾಗಿದೆ.
ಕಾಫಿನಾಡಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಲಾಲ್ ಬ್ಯಾನ್ ಅಭಿಯಾನ ಆರಂಭಿಸಿದ್ದು, ಯುಗಾದಿ ಬಳಿಕದ ಹೊಸ ತೊಡಕಿನಂದು ಮುಸ್ಲಿಂ ಬಳಿ ಮಾಂಸ ಖರೀದಿಸುವುದು ಬೇಡ ಎಂದು ಕರೆ ನೀಡಿದೆ.
ಹಲಾಲ್ ಎಂದರೆ ಅಲ್ಲಾ ಹೆಸರಿನಲ್ಲಿ ನೈವೇದ್ಯವಾದ ಮಾಂಸ. ಬೇರೆ ದೇವರಿಗೆ ಒಪ್ಪಿಸಿದ ಮಾಂಸವನ್ನ ನಾವೇಕೆ ಸ್ವೀಕರಿಸಬೇಕು. ಹಲಾಲ್ ಮಾಡುವಾಗ ಪ್ರಾಣಿಯ ಕತ್ತಿನ ಭಾಗ ಸೀಳಿ ಬಿಡುತ್ತಾರೆ.ಆಗ ಪ್ರಾಣಿಯ ಮೆದುಳಿನ ಗ್ರಂಥಿಯಿಂದ ವಿಷಕಾರಿ ಅಂಶ ಬಿಡುಗಡೆಯಾಗುತ್ತದೆ. ಇಂತಹ ಮಾಂಸ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ವೈಜ್ಞಾನಿಕವಾಗಿ ನಿರೂಪಿತವಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಹಿಂದೂಗಳ ಬಳಿಯೇ ಮಾಂಸ ಸ್ವೀಕರಿಸೋಣ ಎಂದು ವಿಹಿಂಪ, ಬಜರಂಗದಳ ಕರಪತ್ರ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದೆ : ದಿನೇಶ್ ಗುಂಡೂರಾವ್ – Vishwanews24
