ಚಿತ್ರದುರ್ಗ : ಪ್ರೀತಿಸಿ ಮದುವೆ – ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪತಿಯಿಂದ ಚಿತ್ರಹಿಂಸೆ – Vishwanews24

Featured, ರಾಜ್ಯ ನ್ಯೂಸ್

ಪ್ರೀತಿಸಿ ಮದುವೆಯಾದ ಹಿಂದೂ ಯುವತಿ ಮೇಲೆ ದೌರ್ಜನ್ಯ ಆರೋಪ..

ಗಂಡನನ್ನ ಬಿಟ್ಟು ಖಾದರ್ ಹಿಂದೆ ಹೋದ ಉಮಾ..

ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪತಿಯಿಂದ ಚಿತ್ರಹಿಂಸೆ..

ಪೊಲೀಸ್‌ ಮೊರೆಹೋದ ಮಹಿಳೆ..

ಚಿತ್ರದುರ್ಗ : ಗಂಡನನ್ನ ಬಿಟ್ಟು ಖಾದರ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳು ಉಮಾ. ಆದರೆ ಮುಂದೆ ಪ್ರತಿನಿತ್ಯ ಚಿತ್ರಹಿಂಸೆ. ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಕೆಯನ್ನ ಪೀಡಿಸುತ್ತಿದ್ದ ಅಬ್ದುಲ್ ಖಾದರ್. ಈ ಪ್ರಕರಣವು ಲವ್ ಜಿಹಾದ್ ಎನ್ನುವ ಆರೋಪ ಕೇಳಿಬಂದಿದೆ.

ಚಿತ್ರದುರ್ಗ ನಗರದ ನೆಹರು ಬಡಾವಣೆಯಲ್ಲಿ ವಾಸವಿರುವ ಶಿವಮೊಗ್ಗ ಮೂಲದ ಉಮಾ ಮತ್ತು ಚಿತ್ರದುರ್ಗದ ಅಬ್ದುಲ್ ಖಾದರ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ವಿವಾಹಿತೆ ಆಗಿದ್ದ ಉಮಾ ಮೊದಲ ಗಂಡನಿಂದ ವಿಚ್ಛೇದನ ಪಡೆದ ಬಳಿಕ ಖಾದರ್ ಉಮಾಳನ್ನು ಮದುವೆ ಆಗಿದ್ದಳು.

ಮದುವೆಯಾಗಿ ವರ್ಷದ ಬಳಿಕ ಉಮಾಗೆ ಅನಾರೋಗ್ಯದಿಂದ ಎರಡು ಕಾಲುಗಳು ನಿಷ್ಕ್ರಿಯಗೊಂಡು ಹಾಸಿಗೆ ಹಿಡಿದಿದ್ದರು. ಈ ಮಧ್ಯೆ ಕಳೆದ ನಾಲ್ಕು ತಿಂಗಳಿಂದ ಅಬ್ದುಲ್ ಖಾದರ್ ಉಮಾಗೆ ಕಿರುಕುಳ ನೀಡುತ್ತಾ ಧರ್ಮ ನಿಂದನೆ ಮಾಡಿ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಲ್ಲೆ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಬ್ದುಲ್‌ ಖಾದರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸಿಗೆ ಹಿಡಿದ ಉಮಾಳಿಗೆ ಪತಿ ಖಾದರ್ ಉಸಿರುಗಟ್ಟಿಸಿ ಹತ್ಯೆ ಮಾಡುವುದಾಗಿ ಬೆದರಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಉಡುಪಿ: ಪ.ಜಾತಿ ಮತ್ತು ಪ.ಪಂಗಡದ ಗಂಗಾ ಕಲ್ಯಾಣ ಫಲಾನುಭವಿಗಳಿಗೆ 1700 ಕೊಳವೆ ಬಾವಿ ನಿರ್ಮಾಣಕ್ಕೆ ನೇರ ಹಣ ಪಾವತಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ – Vishwanews24

ಕಳೆದ 6-7ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಉಮಾಳಿಗೆ ಖಾದರ್ ಚಿತ್ರ ವಿಚಿತ್ರವಾಗಿ ಕಿರುಕುಳ ನೀಡುತ್ತಿದ್ದು, ನ.16ರ ಸಂಜೆ ಕುಡಿದು ಬಂದು ಪತ್ನಿಯ ಗುಪ್ತಾಂಗಕ್ಕೆ ಕಾಲಿನಿಂದ ಜಾಡಿಸಿ ಒದ್ದಿದ್ದಾನೆ. ಈ ವೇಳೆ ಪೊಲೀಸ್ ಸ್ಟೇಶನ್‌ಗೆ ದೂರು ನೀಡುವುದಾಗಿ ಉಮಾ ಹೇಳಿದಾಗ ಮತ್ತಷ್ಟು ತೀವ್ರವಾಗಿ ಹಲ್ಲೆ ನಡೆಸಿದ್ದನಂತೆ. ಉಮಾ ತನ್ನ ದೂರದ ಸಂಬಂಧಿ ವಿಶ್ವನಾಥ್ ಎಂಬುವವರಿಗೆ ನಡೆದ ವಿಚಾರವನ್ನೆಲ್ಲ ಹೇಳಿ, ಅವರ ಮೂಲಕ ಪೊಲೀಸರ ನೆರವು ಪಡೆದಿದ್ದಾರೆ. ಗಂಭೀರ ಗಾಯಗೊಂಡ ಉಮಾರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೈಹಿಕ, ಮಾನಸಿಕ ಹಿಂಸೆ, ಜಾತಿ ನಿಂದನೆ, ಮತಾಂತರ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ಸಂಚಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಮಂಗಳೂರು : ಕುಕ್ಕೆ ಶ್ರೀ ಸುಬ್ರಹಣ್ಯ ಚಂಪಾ ಷಷ್ಠಿ ಮಹೋತ್ಸವ – ನ.28, 29ರಂದು ಮದ್ಯದಂಗಡಿ ಬಂದ್-ಡಿಸಿ ರವಿಕುಮಾರ್ ಆದೇಶ – Vishwanews24 

Leave a Reply