ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಪಡೆದು ವಂಚನೆ ; ದಂಪತಿ ವಶಕ್ಕೆ – Vishwanews24

Featured, ರಾಜ್ಯ ನ್ಯೂಸ್

ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಪಡೆದು ವಂಚನೆ ; ದಂಪತಿ ವಶಕ್ಕೆ

ಬೆಂಗಳೂರು: ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪದಡಿ ದಂಪತಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸಿದ್ದಲಿಂಗಯ್ಯ ಹಾಗೂ ಪ್ರೇಮಾ ಕುಮಾರಿ ಎಂಬುವರನ್ನು ಬಂಧಿತ ದಂಪತಿ ಎಂದು ಗುರುತಿಸಲಾಗಿದೆ.

ಕಾಲೇಜು ವಿದ್ಯಾರ್ಥಿನಿ ಹತ್ಯೆ ಪ್ರಕರಣ : ಯಾವ ಲವ್‌ ಜಿಹಾದ್‌ ಕಾಣ್ತಿಲ್ಲ, ಅದೊಂದು ಲವ್‌ ಕೇಸ್‌ : ಪರಮೇಶ್ವರ್‌ ತಿರುಗೇಟು – Vishwanews24 

ಬೆಂಗಳೂರಿನ ಪ್ರಕೃತಿನಗರದಲ್ಲಿ ಕೆಲವು ವರ್ಷಗಳಿಂದ ಶ್ರೀ ಸಾಯಿಲಕ್ಷ್ಮಿ ಕೃಪೆ ಚಿಟ್(ರಿ) ಹೆಸರಿನಲ್ಲಿ ಬಂಧಿತ ದಂಪತಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚಿಗೆ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರುಗಳು ಬಂದಿದ್ದವು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ವಂಚನೆಗೊಳಗಾಗಿರುವ ನೂರಾರು ಜನರು ಗುರುವಾರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯೆದುರು ಜಮಾಯಿಸಿದ್ದರು.

ಬಿಜೆಪಿ ಮುಖಂಡ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ – Vishwanews24

Leave a Reply