ಚುನಾವಣಾ ಬಜೆಟ್ : ಉದ್ಯೋಗ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸದೆ ಅನುದಾನ ಬಿಡುಗಡೆಗೆ ಸೀಮಿತವಾದ ಬಜೆಟ್ : ಅಶೋಕ್ ಕುಮಾರ್ ಕೊಡವೂರು -Vishwanews24

Featured, ಉಡುಪಿ

ಚುನಾವಣಾ ಬಜೆಟ್ : ಉದ್ಯೋಗ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸದೆ ಅನುದಾನ ಬಿಡುಗಡೆಗೆ ಸೀಮಿತವಾದ ಬಜೆಟ್ : ಅಶೋಕ್ ಕುಮಾರ್ ಕೊಡವೂರು -Vishwanews24

ಮಹಿಳೆಯರನ್ನು ಮತಗಳನ್ನು ಕೇಂದ್ರೀಕೃತವಾಗಿರಿಸಿಕೊoಡು ವಿಧವಾ ಮಸಾಶನ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅವಿವಾಹಿತ ಮಹಿಳೆಯರಿಗೆ, ವಿಚ್ಚೇದಿತ ಮಹಿಳೆಯರಿಗೆ ಸಹಾಯಧನ ಹೆಚ್ಚಳ ಗೊಳಿಸಲಾಗಿದೆ. ಸಮುದಾಯದ ಓಲೈಕೆಗಾಗಿ ಎಲ್ಲಾ ನಿಗಮಗಳಿಗೆ ಅನುದಾನ ಬರಪೂರ ಬಿಡುಗಡೆಗೊಳಿಸಲಾಗಿದೆ, ಮೇಕೆದಾಟು ಪಾದಯಾತ್ರೆಯ ಪರಿಣಾಮದಿಂದಾಗಿ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಯೊಂದಿಗೆ ಭದ್ರ ಮೇಲ್ದಂಡೆ ಯೋಜನೆ, ಕಳಸಬಂಡೂರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೂ ಅನುದಾನ ಬಿಡುಗಡೆಯಾಗಿದೆ. ಕೊರತೆ ಬಜೆಟ್‌ನ ಮಂಡನೆಯೊoದಿಗೆ ಅನುದಾನಗಳ ಬಿಡುಗಡೆಯು ಕಷ್ಟ ಸಾಧ್ಯವಾಗಲಿದೆ. ಉದ್ಯೋಗ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸದೆ ಅನುದಾನ ಬಿಡುಗಡೆಗೆ ಸೀಮಿತವಾದ ಬಜೆಟ್.

ಅಶೋಕ್ ಕುಮಾರ್ ಕೊಡವೂರು

ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ

Leave a Reply