ಶೋಭಾ ಕರಂದ್ಲಾಜೆ  ಕಾರಿಗೆ ಬೈಕ್ ಡಿಕ್ಕಿ : ಸವಾರ ಸಾವು – Vishwanews24

Featured, ರಾಜ್ಯ ನ್ಯೂಸ್

ಚುನಾವಣಾ ರ್‍ಯಾಲಿ ವೇಳೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ  ಕಾರಿಗೆ ಬೈಕ್ ಡಿಕ್ಕಿ :ಸವಾರ ಸಾವು

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ  ಅವರ ಕಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ.

ಕೆಆರ್ ಪುರದ ಗಣೇಶ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಮೃತನನ್ನು ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಇವರು ಕೆಆರ್ ಪುರ ನಿವಾಸಿ.

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ವೀರಪ್ಪ ಮೊಯ್ಲಿ..! – Vishwanews24

ನಡೆದಿದ್ದೇನು..?: ಸೋಮವಾರ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ‌ ಶೋಭಾಕರಂದ್ಲಾಜೆ ಕೆ.ಆರ್ ಪುರಂ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದರು. ಅವರ ಕಾರನ್ನ ರಸ್ತೆ ಬದಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ಕಾರಿನ ಚಾಲಕ ಡೋರ್ ತೆಗೆದಿದ್ದು, ಹಿಂದೆಯಿಂದ ಬಂದ ಪ್ರಕಾಶ್​ಗೆ ಬಡಿದು ರಸ್ತೆಯ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಅಲ್ಲಿಗೆ ಖಾಸಗಿ ಬಸ್ ಅವರ ಮೇಲೆ ಹರಿದಿದೆ. ತಕ್ಷಣವೇ ಕಾರ್ಯಕರ್ತರು ಪ್ರಕಾಶ್​ರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್​ ಸಾವನ್ನಪ್ಪಿದ್ದಾರೆ.

Leave a Reply