ಚುನಾವಣಾ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುತ್ತಾ ಕೂರುವ ಜಾಯಮಾನ ನಮ್ಮ ಕಾರ್ಯಕರ್ತರದ್ದಲ್ಲ : ಶಾಸಕ ಸಿ.ಟಿ. ರವಿ
ಬೆಂಗಳೂರು : ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿವೆ.
ಬಿಜೆಪಿ ಸೋಲಿನ ಕುರಿತು ಶಾಸಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುತ್ತಾ ಕೂರುವ ಜಾಯಾಮಾನ ನಮ್ಮ ಬಿಜೆಪಿ ಕಾರ್ಯಕರ್ತರದ್ದಲ್ಲ. ಕಾರ್ಯಕರ್ತರೇ ನಮ್ಮ ಶಕ್ತಿ ಮತ್ತು ಸ್ಪೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.
ಸ್ನೇಹಿತರೇ ನಮ್ಮ ಮುಂದೆ ಬಹುದೊಡ್ಡ ಗುರಿಯಿದೆ. ಅದರ ಕಡೆ ಸಾಗೋಣ, ಕರ್ನಾಟಕವನ್ನು ಬೆಳಕಿನತ್ತ ಕೊಂಡೊಯ್ಯೋಣ ಎಂದು ಹೇಳಿದ್ದಾರೆ..

