ದಾಖಲೆ ಬರೆದ ಅಭಿಮನ್ಯು ಮಿಶ್ರಾ:  12ನೇ ವಯಸ್ಸಿಗೆ ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ -Vishwanews24

Featured, ರಾಷ್ಟ್ರ ನ್ಯೂಸ್

ಚೆಸ್ ದಾಖಲೆ ಬರೆದ ಅಭಿಮನ್ಯು ಮಿಶ್ರಾ:  12ನೇ ವಯಸ್ಸಿಗೆ ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ -Vishwanews24

ಬುಡಾಪೆಸ್ಟ್: ಭಾರತ ಮೂಲದ 12 ವರ್ಷದ ಬಾಲಕ ಅಭಿಮನ್ಯು ಮಿಶ್ರಾ ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆ ಬರೆದಿದ್ದಾರೆ.

ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಜಯಿಸಿದ ಅಭಿಮನ್ಯು ಮಿಶ್ರಾ ಈ ದಾಖಲೆ ಬರೆದಿದ್ದಾರೆ.

ಇದೇ ವೇಳೆ ಅಭಿಮನ್ಯು ಮಿಶ್ರಾ 19 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 2002ರ ಆಗಸ್ಟ್ 12ರಂದು ಕಜಕಿಸ್ತಾನದ ಸರ್ಗೆ ಕರ್ಜಾಕಿನ್‌ ಅವರು ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ದಾಖಲೆ ಬರೆದಿದ್ದರು. ಈ ವೇಳೆ ಸರ್ಗೆ ಕರ್ಜಾಕಿನ್‌ ಗೆ 12 ವರ್ಷ ಏಳು ತಿಂಗಳು ಪ್ರಾಯವಾಗಿತ್ತು. ಆದರೆ ಈ ದಾಖಲೆಯನ್ನು 12 ವರ್ಷ ನಾಲ್ಕು ತಿಂಗಳು ಪ್ರಾಯದ ಅಭಿಮನ್ಯು ಮಿಶ್ರಾ ಮುರಿದಿದ್ದಾರೆ.

ಭಾರತೀಯ ಮೂಲದ ಅಭಿಮನ್ಯು ಮಿಶ್ರಾ ಅಮೆರಿಕದಲ್ಲಿ ಜನಿಸಿದವರು. ಕಳೆದ ಕೆಲವು ತಿಂಗಳಿನಿಂದ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸತತ ಕೂಟಗಳಲ್ಲಿ ಅಭಿಮನ್ಯು ಮಿಶ್ರಾ ಆಡುತ್ತಿದ್ದಾರೆ.