ಛತ್ರಪತಿ ಶಿವಾಜಿಯವರ 391ನೇ ಜಯಂತಿ : ಪ್ರಧಾನಿ ಸೇರಿ ಹಲವು ಪ್ರಮುಖ ನಾಯಕರಿಂದ ಶುಭಾಶಯ -Vishwanews24 https://bit.ly/3k3lsTh
ಛತ್ರಪತಿ ಶಿವಾಜಿಯವರ 391ನೇ ಜಯಂತಿ : ಪ್ರಧಾನಿ ಸೇರಿ ಹಲವು ಪ್ರಮುಖ ನಾಯಕರಿಂದ ಶುಭಾಶಯ -Vishwanews24
ನವದೆಹಲಿ : ಇಂದು ಮರಾಠ ಸಾಮ್ರಾಟ ಛತ್ರಪತಿ ಶಿವಾಜಿಯವರ 391ನೇ ಜಯಂತೋತ್ಸವ. ಭಾರತ ದೇಶ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಒಬ್ಬರು. ಜೀಜಾಬಾಯಿ ಅವರ ಪ್ರೇರಣಾತ್ಮಕ ಮಾತುಗಳಿಂದಲೇ ಶಿವಾಜಿ ಬಾಲ್ಯದಲ್ಲೇ ಮರಾಠ ಸಾಮ್ರಾಜ್ಯದ ಕನಸನ್ನು ಕಂಡವರು.
ದೇಶದಾದ್ಯಂತ ಇಂದು ಶಿವಾಜಿ ಮಹಾರಾಜ್ ಅವರ 391ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಇನ್ನು, ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಶಿವಾಜಿಯವರಿಗೆ ಸಲ್ಲಿಸುವ ಗೌರವಾರ್ಥವಾಗಿ ಸರ್ಕಾರಿ ರಜಾ ದಿನವೆಂದು ಘೋಷಿಸಿದೆ.
ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ನನ್ನು ಲಾಂಚ್ ಮಾಡಿದ ಜೂ.ಚಿರು -Vishwanews24
ಈ ಶುಭ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನೊಳಗೊಂಡು ಹಲವು ಪ್ರಮುಖ ನಾಯಕರು ಶುಭ ಹಾರೈಸಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಶಿವಾಜಿ ಜಯಂತಿಯ ಶುಭಾಶಯವನ್ನು ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ.
मां भारती के अमर सपूत छत्रपति शिवाजी महाराज को उनकी जयंती पर शत-शत नमन। उनके अदम्य साहस, अद्भुत शौर्य और असाधारण बुद्धिमत्ता की गाथा देशवासियों को युगों-युगों तक प्रेरित करती रहेगी। जय शिवाजी! pic.twitter.com/3vhVgBYp5R
— Narendra Modi (@narendramodi) February 19, 2021
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೀಗೆ ಬರೆದುಕೊಂಡಿದ್ದಾರೆ.ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭಾರತೀಯರಿಗೆ ಶಿವಾಜಿ ಜಯಂತಿಯ ಶುಭಾಶಯ ತಿಳಿಸಿದ್ದಾರೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಶುಭಾಶಯ ತಿಳಿಸಿದ್ದಾರೆ.ನಿತಿನ್ ಗಡ್ಕರಿ ಹೀಗೆ ಶುಭಾಶಯ ತಿಳಿಸಿದ್ದಾರೆ.
